ಪುತ್ತೂರು: ವಿದ್ಯಾರ್ಥಿಗಳ ಬರ್ತ್ ಡೇ ಪಾರ್ಟಿಗೆ ಅಡ್ಡಿಪಡಿಸಿದ ಭಜರಂಗ ದಳ ಕಾರ್ಯಕರ್ತನ ಬಂಧನ!

ನ್ಯೂಸ್ ಕನ್ನಡ ವರದಿ(12-04-2018): ಪುತ್ತೂರು ಕಾಲೇಜ್ ಒಂದರ ವಿದ್ಯಾರ್ಥಿಗಳ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಸಾರ್ಥಿಯೋರ್ವ ಇದ್ದಾನೆಂದು ಪಾರ್ಟಿ ನಡೆಯುತ್ತಿರುವ ಹೋಟೆಲ್ ಗೆ ಬಂದು ತಕರಾರು ಎಬ್ಬಿಸಿದ ಭಜರಂಗ ಕಾರ್ಯಕರ್ತನನ್ನು ಪೋಲೀಸರು ಬಂಧಿಸಿದ ಘಟನೆಯು ಪುತ್ತೂರಿನ ಬೊಳ್ವಾರಿನಿಂದ ವರದಿಯಾಗಿದೆ.

ಪುತ್ತೂರು ವಿವೇಕಾನಂದ ಕಾನೂನು ಪದವಿ ಕಾಲೇಜು ವಿದ್ಯಾರ್ಥಿಗಳು ಬೊಳುವಾರಿನ ರೆಸ್ಟೋರೆಂಟ್ ಒಂದರಲ್ಲಿ ಕೇಕ್ ಕತ್ತರಿಸಿ ಸಹ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ ಆಚರಿಸುತ್ತಿದ್ದರು. ಈ ಪಾರ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯೊಬ್ಬ ಇದ್ದಾನೆಂದು ಮಾಹಿತಿಯ ಪ್ರಕಾರ ಹತ್ತು ಜನ ಭಜರಂಗ ದಳದ ಕಾರ್ಯಕರ್ತರು ಹೋಟೆಲ್ ಗೆ ನುಗ್ಗಿ ದಾಂದಲೆ ನಡೆಸಿದರು. ನಂತರ ಬರ್ತ್ ಡೇ ಪಾರ್ಟಿಯಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿದ್ದಾರೆ ಎಂದು ಮನವರಿಕೆಯಾಗಿ ಹೋಟೆಲ್ ನಿಂದ ಕಾಲ್ಕಿತ್ತಿದ್ದಾರೆ.

ಈ ವಿಷಯವನ್ನು ತಿಳಿದ ಪುತ್ತೂರು ನಗರ ಪೋಲಿಸರು ಭಜರಂಗ ದಳ ಕಾರ್ಯಕರ್ತರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಪ್ರಮುಖ ಆರೋಪಿ ಭಜರಂಗದಳದ ಶ್ರೀದರ್ ತೆಂಕಿಲ ಎಂವನನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆಕ್ಷನ್ 107 ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ವು ತಕ್ಷಣವೇ ಬಂಧಿಸಲಾಗುವುದೆಂದು ಪೋಲಿಸ್ ಇನ್ಸ್ ಪೆಕ್ಟರ್ ಶರಣ್ ಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *