“ರಮಾನಾಥ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗಲಿದೆ”: ನಳಿನ್ ಕುಮಾರ್

ನ್ಯೂಸ್ ಕನ್ನಡ ವರದಿ-(12.04.18): ಕರ್ನಾಟಕ ವಿಧಾನಸಭಾ ಚುನಾವಣೆಗೆ ವೇದಿಕೆಯು ಸಿದ್ಧವಾಗುತ್ತಿದ್ದು, ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅಲ್ಲಲ್ಲಿ ಅಸಮಧಾನವೂ ವ್ಯಕ್ತವಾಗುತ್ತಿದೆ. ಈ ನಡುವೆ ಕರ್ನಾಟಕ ಅರಣ್ಯ ಸಚಿವ ರಮಾನಾಥ ರೈ, ಬಿಜೆಪಿಗರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದ್ದರು. ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ನಮ್ಮಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಸ್ಫೋಟವಾಗಲು ಸಾಧ್ಯವಿಲ್ಲ. ಬಿಜೆಪಿಯವರು ಕಾಂಗ್ರೆಸ್ ಸೇರುತ್ತಾರೆಂದು ರಮಾನಾಥ ರೈ ಕಾದು ಕುಳಿತುಕೊಳ್ಳಬೇಕು ಅಷ್ಟೇ ಎಂದು ಅವರು ಹೇಳಿದ್ದಾರೆ.

ನಮ್ಮ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ವ್ಯಕ್ತಿಯು ತನಗೆ ಟಿಕೆಟ್ ಸಿಗಲು ಹಲವು ಪ್ರಯತ್ನಗಳನ್ನು ನಡೆಸುತ್ತಾನೆ. ಕೊನೆಗೆ ಒಂದು ವೇಳೆ ಟಿಕೆಟ್ ಸಿಕ್ಕಿಲ್ಲ ಎಂದಾದರೆ ಘೋಷಣೆಯಾದ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಾನೆ. ಇನ್ನು ಕಾಂಗ್ರೆಸ್ ನ ಪಟ್ಟಿ ಬಿಡುಗಡೆ ಆಗಬೇಕಷ್ಟೇ, ಆಗ ತಿಳಿಯುತ್ತದೆ ಎಷ್ಟು ಮಂದಿ ಬಿಜೆಪಿ ಸೇರುತ್ತಾರೆಂದು. ಈ ನಡುವೆ ರಮಾನಾಥ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗಲಿದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *