ಅಮೇರಿಕಾ ಹಾಗೂ ರಷ್ಯಾಗಳ ಪ್ರತಿಷ್ಠೆಯ ನಡುವೆ ಮಹಾ ಯುದ್ಧಕ್ಕೆ ವೇದಿಕೆಯಾಗುತ್ತಿರುವ ಸಿರಿಯಾ !
ನ್ಯೂಸ್ ಕನ್ನಡ ವರದಿ(12-04-2018): ಆಂತರಿಕ ಯುದ್ಧದಿಂದ ಜರ್ಜರಿತವಾದ ಸಿರಿಯಾವು ಪ್ರಪಂಚದ ಮತ್ತೊಂದು ಮಹಾಯುದ್ಧಕ್ಕೆ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸಿರಿಯಾದ ವಿಷಯದಲ್ಲಿ ವಿಶ್ವದ ದೊಡ್ಡಣ್ಣರಾದ ಅಮೇರಿಕಾ ಹಾಗೂ ರಷ್ಯಾಗಳು ಪರಸ್ಪರ ಹಲ್ಲು ಮಸೆಯಲು ಪ್ರಾರಂಭಿಸಿದೆ.
ಅಮೇರಿಕಾದ ಯಾವುದೇ ಕ್ಷಿಪಣಿ ಸಿರಿಯಾದತ್ತ ಬಂದರೆ ಅದನ್ನು ಹೊಡೆದುರುಳಿಸಿ ಎಂದು ರಷ್ಯಾವು ತನ್ನ ಸೈನಿಕರಿಗೆ ಆದೇಶ ನೀಡಿದ ಬೆನ್ನಲ್ಲೇ ಅಮೇರಿಕಾವು ರಷ್ಯಾಕ್ಕೆ ಕ್ಷಿಪಣಿ ಹೊಡೆದುರುಳಿಸಲು ಸನ್ನದ್ಧರಾಗಿ ನಿಲ್ಲುವಂತೆ ಹೇಳಿದೆ.
ರಷ್ಯಾದ ಜೊತೆಗಿನ ನಮ್ಮ ಸಂಬಂಧವು ಹಿಂದೆಂದಿಗಿಂತಲೂ ಬಹಳ ಹದಗೆಟ್ಟಿದೆ. ಇದಕ್ಕೆ ಕಾರಣ ರಷ್ಯಾ ಮಾನವ ಹತ್ಯೆಯಲ್ಲಿ ಸಿರಿಯಾದ ಅಧ್ಯಕ್ಷನೊಂದಿಗೆ ಕೈಜೋಡಿಸಿರುವುದಾಗಿದೆ. ರಾಸಾಯನಿಕಗಳ ಮೂಲಕ ಮಕ್ಕಳು ಸೇರಿದಂತೆ ರಷ್ಯಾದ ನಾಗರಿಕರನ್ನು ಕೊಲ್ಲುತ್ತಿರುವ ಬಷಾರುಲ್ ಅಸಾದ್ ಎಂಬ ಪ್ರಾಣಿಯನ್ನು ರಷ್ಯಾ ಎಲ್ಲಿಯವರೆಗೆ ಬೆಂಬಲಿಸುತ್ತದೋ ಅಲ್ಲಿಯವರೆಗೆ ರಷ್ಯಾದೊಂದಿಗೆ ನಮ್ಮ ಸಂಬಂಧ ಸುದಾರಿಸಲು ಸಾಧ್ಯವಿಲ್ಲ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಂತೂ ಮೊದಲೇ ಬೆಂಕಿಯಲ್ಲಿ ಬೇಯುತ್ತಿರುವ ಯುದ್ಧ ಪೀಡಿತ ಸಿರಿಯಾವು ಅಮೇರಿಕಾ ಹಾಗೂ ರಷ್ಯಾಗಳ ಪ್ರತಿಷ್ಠೆಯ ನಡುವೆ ವಿಶ್ವದ ಇನ್ನೊಂದು ಮಹಾಯುದ್ಧಕ್ಕೆ ವೇದಿಕೆಯಾಗುತ್ತಿದೆಯೆಂದೇ ಹೇಳಬಹುದು.