ಝುಕರ್ ಬರ್ಗ್ ನಂತೆಯೇ ಪ್ರಾಮಾಣಿಕವಾಗಿ ರಾಹುಲ್ ಗಾಂಧಿ ಕ್ಷಮೆ ಕೇಳಲಿ: ರವಿ ಶಂಕರ್ ಪ್ರಸಾದ್
ನ್ಯೂಸ್ ಕನ್ನಡ ವರದಿ(12-04-2018): ಕೇಂಬ್ರಿಜ್ ದತ್ತಾಂಶ ಸೋರಿಕೆ ಪ್ರಕರಣದಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಕ್ಷಮೆ ಕೇಳಿದಂತೆ ರಾಹುಲ್ ಗಾಂಧಿ ಪ್ರಾಮಾಣಿಕವಾಗಿ ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಚುನಾವಣೆಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿರುವುದಕ್ಕಾಗಿ ದೇಶದ ಜನತೆಯ ಮುಂದೆ ರಾಹುಲ್ ಗಾಂಧಿ ಬಹಿರಂಗ ಕ್ಷಮೆ ಯಾಚಿಸಬೇಕಿದ್ದು ಇನ್ನು ಮುಂದಕ್ಕೆ ಇಂತಹ ಕೆಲಸವನ್ನು ಮಾಡಲಾರನೆಂದು ಹೇಳಬೇಕಾಗಿದೆ ಎಂದರು.
ದೇಶದ ಜನತೆಯ ಮಾಹಿತಿಯನ್ನು ಅವರ ಗಮನಕ್ಕೆ ಬಾರದ ರೀತಿಯಲ್ಲಿ ಬಳಸಿಕೊಳ್ಳುವುದು ಅಕ್ಷಮ್ಯವಾಗಿದ್ದು, ಈ ಮೂಲಕ ದೇಶದ ಜನರನ್ನು ವಿಭಜಿಸಿದ ಕಾರಣಕ್ಕಾಗಿ ಕ್ಷಮೆ ಕೇಳುವುದು ಅಗತ್ಯವಾಗಿದೆ ಎಂದರು.