ಶೋಭಾ ಕರಂದ್ಲಾಜೆ ನನಗೆ ನೇಪಾಳದಲ್ಲಿ ಹಂದಿಮಾಟ ಮಾಡಿಸಿದ್ದಾರೆ: ಕೆಜೆಪಿ ಸಂಸ್ಥಾಪಕ ಪ್ರಸನ್ನ!
ನ್ಯೂಸ್ ಕನ್ನಡ ವರದಿ-(12.04.18): ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯವರ ಮದುವೆ ವೀಡಿಯೋ ಬಿಡುಗಡೆ ಮಾಡುತ್ತೇನೆ ಎಂದಿದ್ದ ಕೆಜೆಪಿ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಇದೀಗ ಶೋಭಾ ಕರಾಂದ್ಲಾಜೆಯ ಮೇಲೆ ಆರೋಪ ಹೊರಿಸಿದ್ದಾರೆ. ಶೋಭಾ ಕರಂದ್ಲಾಜೆ ನನಗೆ ವೈಯಕ್ತಿಕವಾಗಿ ಏನೂ ತೊದರೆ ನೀಡಲಿಲ್ಲ. ಆದರೆ ನಾನು ಬೆಳೆಯದಂತೆ ಅವರು ತಡೆದಿದ್ದಾರೆ. ಅಲ್ಲದೇ ಶೋಭಾ ಕರಂದ್ಲಾಜೆ ನೇಪಾಳದಲ್ಲಿ ನನಗೆ ಹಂದಿ ಮಾಟ ಮಾಡಿಸಿದ್ದಾರೆ ಎಂದು ಪದ್ಮನಾಭ ಪ್ರಸನ್ನ ಆರೋಪಿಸಿದ್ದಾರೆ.
“ಕರ್ನಾಟಕ ಜನತಾ ಪಕ್ಷವು ಈಗಾಗಲೇ 46 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಶೀಘ್ರದಲ್ಲೇ ಎರಡನೇ ಹಂತದ ಪಟ್ಟಿಯನ್ನೂ ಬಿಡುಗಡೆ ಮಾಡುತ್ತೇವೆ. ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ತೇರದಾಳದಲ್ಲಿ ಉಮಾಶ್ರೀ ವಿರುದ್ಧ ಹಾಗೂ ಯಶವಂತಪುರದಲ್ಲಿ ಶೋಭಾ ಕರಂದ್ಲಾಜೆಯ ವಿರುದ್ಧ ಸ್ಪರ್ಧಿಸಲಿದ್ದೇನೆ. ನಾನು ಶೋಭಾ ಕರಂದ್ಲಾಜೆಯ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ. ಒಂದು ವೇಳೆ ಶೋಭಾ ಚುನಾವಣೆಗೆ ಸ್ಪರ್ಧಿಸದಿದ್ದರೆ ನಾನೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.