ಅನಿಲ್ ಕುಂಬ್ಳೆ, ದ್ರಾವಿಡ್’ರನ್ನು ಪಕ್ಷಕ್ಕೆ ಆಹ್ವಾನಿಸಿದ ಬಿಜೆಪಿ! ಅವರ ಉತ್ತರವೇನು ಗೊತ್ತೇ? ಮುಂದೆ ಓದಿ.

ನ್ಯೂಸ್ ಕನ್ನಡ ವರದಿ: ಇನ್ನು ಒಂದು ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ತಮ್ಮಿಂದಾಗುವ ಎಲ್ಲಾ ರಾಜಕೀಯ ನಡೆಯನ್ನು ಚಾಣಕ್ಯ ರೀತಿಯಲ್ಲಿ ಇಟ್ಟು ಪ್ರಭಾವ ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಯುವಕರ, ಮೊದಲ ಬಾರಿಗೆ ಮತದಾನ ನಡೆಸುವ ಹದಿಹರೆಯದ ಯುವ ಸಮೂಹವನ್ನು ತಮ್ಮ ಕಡೆಗೆ ಸೆಳೆದರೆ ಫಲಿತಾಂಶದಲ್ಲಿ ಬಹಳಷ್ಟು ಪರಿಣಾಮ ಉಂಟಾಗಲಿದೆ ಎಂದು ಅರಿತಿರುವ ಬಿಜೆಪಿ ಮೈಸೂರು ರಾಜಮನೆತನದ ಯುವರಾಜ ಯದುವೀರ್ ಅವರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿತು ಆದರೆ ಅದು ವಿಫಲವಾಯಿತು. ಇದೀಗ ಬಿಜೆಪಿ ಮಾಜಿ ಕ್ರಿಕೆಟ್‍ಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಕಸರತ್ತು ನಡೆಸಿದೆ. ಕಳೆದ ಎರಡು ವಾರಗಳಿಂದ ಈ ಕೆಲಸದಲ್ಲಿ ನಿರತವಾಗಿರುವ ಬಿಜೆಪಿ ಯಾವುದೇ ವಿವಾದವಿಲ್ಲದ ಕುಂಬ್ಳೆ ಹಾಗೂ ದ್ರಾವಿಡ್ ಜೊತೆ ಅನೇಕ ಸುತ್ತಿನ ಮಾತುಕತೆ ಕೂಡ ನಡೆಸಿದೆ ಎಂದು ದಿ ಪ್ರಿಂಟ್ ಮೀಡಿಯಾ ವರದಿ ಮಾಡಿದೆ.

ಭಾರತೀಯ ಜನತಾ ಪಕ್ಷ ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆ ಹಾಗೂ ಇನ್ನೊಬ್ಬರನ್ನು ಲೋಕಸಭೆ ಚುನಾವಣೆಗೆ ಇಳಿಸುವ ಪ್ರಯತ್ನದಲ್ಲಿದ್ದರೂ ಈ ಇಬ್ಬರೂ ಆಟಗಾರರು ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿ ಬಿಜೆಪಿ ಆಹ್ವಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ನಮ್ಮ ಪ್ರಯತ್ನ ನಿಂತಿಲ್ಲ ಇನ್ನೊಂದು ಬಾರಿ ಮಾತುಕತೆ ನಡೆಸಿ ಯಶಸ್ವಿಯಾಗುವ ಭರವಸೆ ಇದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಭಾರತ ಕ್ರಿಕೆಟ್ ಆಟಗಾರರು ಹಲವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೀರ್ತಿ ಆಜಾದ್, ಚೇತನ್ ಚೌಹಾಣ್, ಮಾಜಿ  ನಾಯಕ ಮಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿದ್ದು, ಶ್ರೀಶಾಂತ್, ಮಹಮ್ಮದ್ ಕೈಫ್ ಈಗಾಗಲೇ ರಾಜಕೀಯದಲ್ಲಿ ತಮ್ಮ ಆಸಕ್ತಿ ತೋರಿಸಿದ್ದಾರೆ. ಸಿದ್ದು ಈಗಲೂ ಪಂಜಾಬ್ ಸರ್ಕಾರದ ಮಂತ್ರಿಯಾಗಿದ್ದಾರೆ.

Leave a Reply

Your email address will not be published. Required fields are marked *