ಇಂಥವರಿಗೇ ವೋಟು ಹಾಕಿ ಎಂದು ಹೇಳುವುದಿಲ್ಲ, ಆದರೆ ಬಿಜೆಪಿಗೆ ಮಾತ್ರ ಮತ ನೀಡಬೇಡಿ: ಪ್ರಕಾಶ್ ರೈ
ನ್ಯೂಸ್ ಕನ್ನಡ ವರದಿ-(12.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಕುರಿತಾದಂತೆ ದಕ್ಷಿಣಭಾರತದ ಖ್ಯಾತ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇಂಥವರಿಗೇ ಮತ ಹಾಕಿ ಎಂದು ನಾನು ಹೇಳುವುದಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ಮಾತ್ರ ಮತ ನೀಡಬೇಡಿ ಎಂದು ಅವರು ಹೇಳಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರೈ, ನಾನು ಈಗಾಗಲೇ ಸಿನಿಮಾ ಕ್ಷೇತ್ರದ ಮೂಲಕವೇ ಪರಿಚಿತಗೊಂಡಿದ್ದೇನೆ, ಹೆಸರು, ಹಣ ಮಾಡಿಕೊಂಡಿದ್ದೇನೆ. ನನಗೆ ರಾಜಕೀಯದ ಅಗತ್ಯವಿಲ್ಲ. ರಾಜಕೀಯವಿಲ್ಲದೆಯೇ ಸಮಾಜದ ದಮನಿತರ ಧ್ವನಿಯಾಗಬೇಕು. ಜೀವನದಿಯಾಗಿರುವ ಕಾವೇರಿಯನ್ನು ಒಂದೇ ದೇಶದ ಎರಡು ರಾಜ್ಯಗಳಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಪಕ್ಷದವರೇ ಈ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಸಮಸ್ಯೆಯ ಕುರಿತಾದಂತೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.