ಆಸಿಫಾ ರೇಪ್ ಆ್ಯಂಡ್ ಮರ್ಡರ್: ನಕಲಿ ಹಿಂದುತ್ವವಾದಿಗಳ ಚಳಿ ಬಿಡಿಸಿದ ನಟಿ ಸೋನಮ್ ಕಪೂರ್!

ನ್ಯೂಸ್ ಕನ್ನಡ ವರದಿ-(12.04.18): ಕಳೆದ ಫೆಬ್ರವರಿ ತಿಂಗಳಲ್ಲಿ ಜಮ್ಮುವಿನ ಕಥುವಾ ಎಂಬಲ್ಲಿ ಆಸೀಫಾ ಎಂಬ 8 ವರ್ಷದ ಬಾಲಕಿ ಕುದುರೆ ಮೇಯಿಸಲು ಹೋದ ಸಂದರ್ಭದಲ್ಲಿ ಕೊಲೆಯಾಗಿದ್ದಳು. ಮೊದಲಿಗೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿ ಅದು ಸಫಲವೂ ಆಗಿತ್ತು. ಆದರೆ ಈ ಪ್ರಕರಣದ ಕುರಿತಾದಂತೆ ಬಾಲಕಿಯ ಬಖೇರ್ ವಾಲ್ ಸಮುದಾಯವು ತೀವ್ರ ಪ್ರತಿಭಟನೆಯನ್ನು ನಡೆಸಿದ ಕಾರಣದಿಂದಾಗಿ ಪ್ರಕರಣದ ಕುರಿತಾದಂತ ವಿವರವು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಕೂಡಿ ಹಾಕಿ ಮಾದಕ ವಸ್ತುವನ್ನು ನೀಡಿ ಬಾಲಕಿಯನ್ನು ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು ಎಂಬ ಬೆಚ್ಚಿ ಬೀಳಿಸುವ ವರದಿಯು ಹೊರಬಿದ್ದಿದೆ. ಇದೀಗ ಈ ಕುರಿತಾದಂತೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಿವುಡ್ ನಟಿ ಸೋನಮ್ ಕಪೂರ್ ಕೂಡಾ ಇದೀಗ ಈ ಕುರಿತು ಧ್ವನಿಯೆತ್ತಿದ್ದಾರೆ.

ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿದ ನಟಿ ಸೋನಮ್ ಕಪೂರ್, ಕೆಲವು ನಕಲಿ ರಾಷ್ಟ್ರೀಯವಾದಿಗಳು ಮತ್ತು ನಕಲಿ ಹಿಂದುತ್ವವಾದಿಗಳ ಕೆಲಸದಿಂದ ನಮಗೆ ತಲೆತಗ್ಗಿಸುವಂತಾಗಿದೆ ಮತ್ತು ಇದು ನಾಚಿಗೇಡಿನ ವಿಷಯವಾಗಿದೆ. ನನ್ನ ದೇಶದಲ್ಲಿ ಇಂತಹಾ ಪ್ರಕರಣಗಳು ಸಂಭವಿಸಬಹುದೆಂದು ನಂಬಲಾಗುತ್ತಿಲ್ಲ ಎಂದು ಬರೆದಿದ್ದಾರೆ. ಇದೂ ಮಾತ್ರವಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ಒಂದು ವೇಳೆ ಇದೇ ಜಾಗದಲ್ಲಿ ಹಿಂದೂ ಬಾಲಕಿಯನ್ನು ಮುಸ್ಲಿಮರು ಮಸೀದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಂದಿದ್ದಲ್ಲಿ ಪರಿಸ್ಥಿತಿ ಏನಾಗುತ್ತಿತ್ತು? ಹಿಂದೂಗಳು ಯಾಕೆ ಈಗ ಸುಮ್ಮನಾಗಿದ್ದಾರೆ ಎಂಬ ಸಂಜೀವ್ ಭಟ್ ರ ಟ್ವೀಟನ್ನು ರಿಟ್ವೀಟ್ ಮಾಡಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಈ ಪ್ರಕರಣದ ಕುರಿತಾದಂತೆ ಖಂಡನೆ ವ್ಯಕ್ತಪಡಿಸಿದ ಟ್ವೀಟ್ ಗಳನ್ನು ರೀಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *