ಪ್ರಕಾಶ್ ರೈಯಂತ ಕಾಗೆಗಳು ನಿತ್ಯ ಕಾ ಕಾ ಎನ್ನುವುದು!: ಪ್ರತಾಪ್ ಸಿಂಹ ತಿರುಗೇಟು
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜಕೀಯ ನಾಯಕರು ಪರಸ್ಪರ ವಾಕ್ಸಮರದ ಕೆಸರೆರಚಾಟದಲ್ಲಿ ತೊಡಗಿದ್ದು. ಅಷ್ಟೇ ಅಲ್ಲದೇ ಹಿರಿಯ ನಟ ಪ್ರಕಾಶ್ ರೈ ಈ ಬಾರಿ ರಾಜ್ಯಾದ್ಯಂತ ಸುತ್ತಾಡುತ್ತಾ ತಮ್ಮದೇ ಶೈಲಿಯಲ್ಲಿ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ
ಇಂದು ಪ್ರಕಾಶ್ ರೈ ನೀವು ಇಂತಹ ಪಕ್ಷಕ್ಕೇ ಮತಹಾಕಿ ಎಂದು ನಾನು ಹೇಳಲ್ಲ ಆದರೆ ಬಿಜೆಪಿ ಪಕ್ಷಕ್ಕೆ ಮಾತ್ರ ಮತ ಹಾಕಬೇಡಿ ಎಂದು ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ತೊಡೆತಟ್ಟಿದ್ದಾರೆ. ಇದೇ ಸಂಧರ್ಭದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ ಪ್ರಾಣಿಗಳು ಆಗಾಗ ಮೌನವಾಗಿರುತ್ತೆ ಎಂದು ಟಾಂಗ್ ನೀಡಿದ್ದರು.
ಪ್ರಕಾಶ್ ರೈ ಯವರ ಹೇಳಿಕೆಗೆ ತಮ್ಮ ಸಾಮಾಜಿಕ ಜಾಲತಾಣದ ಟ್ವಿಟರ್ ಖಾತೆಯಲ್ಲಿ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ನಿಮ್ಮಂತಹ ಕಾಗೆಗಳು ನಿತ್ಯ ಕಾ ಕಾ ಎನ್ನುವುದು, ಸಿಂಹ ಸಂಧರ್ಭ ಬಂದಾಗ ಮಾತ್ರ ಘರ್ಜಿಸುತ್ತದೆ ಎಂದು ಹೇಳಿ ಪ್ರಕಾಶ್ ರೈ ಅವರನ್ನು ಕಾಗೆಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
ಪ್ರಾಣಿಗಳು ಆಗಾಗ ಮೌನವಾಗಿರುತ್ತವೆ ಎಂದು ಪ್ರತಾಪ ಸಿಂಹ ಕಾಲೆಳೆದ ರೈ. ಅಯ್ಯೋ #JustAssKing @prakashraaj ನಿಮ್ಮಂಥ ಕಾಗೆಗಳು ಮಾತ್ರ ನಿತ್ಯವೂ ಕಾ ಕಾ ಎನ್ನುವುದು, ಸಿಂಹ ಗರ್ಜಿಸೋದು ಸಂದರ್ಭ ಬಂದಾಗ ಮಾತ್ರ! https://t.co/zP58JaQYVT
— Pratap Simha (@mepratap) April 12, 2018