ಅತ್ಯಾಚಾರ ಮತ್ತು ಕೊಲೆಗೈಯಲ್ಪಟ್ಟ ಆಸೀಫಾ ಜಾಗದಲ್ಲಿ ಹಿಂದೂ ಬಾಲಕಿಯಿದ್ದಲ್ಲಿ ಏನಾಗುತ್ತಿತ್ತು?: ಸಂಜೀವ್ ಭಟ್ ಪ್ರಶ್ನೆ

ನ್ಯೂಸ್ ಕನ್ನಡ ವರದಿ-(12.04.18): ಗುಜರಾತ್ ನ ಇಂಡಿಯನ್ ಪೊಲೀಸ್ ಅರ್ವಿಸ್ ಆಫೀಸರ್ ಆಗಿದ್ದ ಸಂಜೀವ್ ಭಟ್ ರವರು ದೇಶದಲ್ಲಿ ನಡೆಯುತ್ತಿರುವ ಕೋಮುವಾದದ ಅತಿರೇಕಗಳು, ದೇಶದ ಆಡಳಿತಾತ್ಮಕ ವೈಫಲ್ಯಗಳ ಕುರಿತಾದಂತೆ ಧ್ವನಿಯೆತ್ತುತ್ತಿರುತ್ತಾರೆ. ಇದೀಗ ಕಾಶ್ಮೀರದಲ್ಲಿ ಎಂಟು ವರ್ಷದ ಆಸಿಫಾ ಎಂಬ ಬಾಲಕಿಯನ್ನು ಮಾದಕ ದ್ರವ್ಯ ನೀಡಿ ಅತ್ಯಾಚಾರಗೈದು ಕೊಲೆ ಮಾಡಿದ್ದು, ಈ ಪ್ರಕರಣದ ಕುರಿತಾದಂತೆ ಸಂಜೀವ್ ಭಟ್, ಅತ್ಯಾಚಾರಕ್ಕೊಳಗಾದ ಮುಸ್ಲಿಮ್ ಬಾಲಕಿಯ ಜಾಗದಲ್ಲಿ ಹಿಂದೂ ಹುಡುಗಿ ಇದ್ದಲ್ಲಿ ಇಲ್ಲಿನ ಪರಿಸ್ಥಿತಿ ಏನಾಗುತ್ತಿತ್ತು? ಎಂದು ಟ್ವಿಟ್ಟರ್ ಮೂಲಕ ಪ್ರಶ್ನಿಸಿದ್ದಾರೆ.

“ಸ್ವಲ್ಪ ಆಲೋಚನೆ ಮಾಡಿ ನೋಡಿ, ಒಂದು ವೇಳೆ ಹಿಂದೂ ಧರ್ಮಕ್ಕೆ ಸೇರಿದ ಬಾಲಕಿಯೋರ್ವಳನ್ನು ಮುಸ್ಲಿಮರು ಪೀಡಿಸಿ, ಅತ್ಯಾಚಾರ ಮಾಡಿ, ಮಾದಕದ್ರವ್ಯ ನೀಡಿ ಮಸೀದಿಯೊಳಗೆ ಕೊಲೆ ಮಾಡಿದ್ದಿದ್ದರೆ ಇಲ್ಲಿನ ಮಾಧ್ಯಮಗಳ ಅವಸ್ಥೆ ಏನಾಗುತ್ತಿತ್ತು? ಯಾವ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದವು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಹಿಂದೂಗಳು ಕೂಡಾ ಈ ಕುರಿತು ಧ್ವನಿ ಎತ್ತಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *