Shocking! ಕಾಮದ ಮೋಜಿಗಾಗಿ ಕಾಮೋತ್ತೇಜಕ ಇಂಜೆಕ್ಷನ್ ತೆಗೆದ ಯುವತಿ!: ನಂತರ ಆದದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಇತ್ತೀಚೆಗೆ ಕಾಮ ಎನ್ನುವುದು ಆಟವಾಗಿದೆ. ಪ್ರಾಣವನ್ನು ಕೂಡ ಲೆಕ್ಕಿಸದೆ ಇರುವಷ್ಟು ಮಟ್ಟಿಗೆ ಇಳಿದು ಹೋಗಿದೆ. ಮಹಾರಾಷ್ಟ್ರದ ಭವಾಂಡಿಯಲ್ಲಿ ಎಪ್ರಿಲ್ 8 ರಂದು ಮುಂಬ್ರಾದ ಅಮೃತನಗರದ ನಿವಾಸಿಯಾಗಿದ್ದ ಸುಮಾರು 29 ವಷ೯ದ ಯುವತಿಯೊಬ್ಬಳ ಕಾಮೋತ್ತೇಜಕ ಇಂಜೆಕ್ಷನ್ ತೆಗೆದುಕೊಂಡಿದ್ದು ಅದರ ಪ್ರಮಾಣ ಅತಿಯಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮೃತ ಯುವತಿಯನ್ನು ಆಕೆಯ ಪ್ರಿಯತಮ ಕಲ್ಯಾಣ ಎಂಬುವನು ಅಶೋಕ್ ಹೋಟೆಲ್ ಗೆ ಕರೆದೊಯ್ದಿದ್ದ. ಕಾಮೋತ್ತೇಜಕ ಇಂಜೆಕ್ಷನ್ ತೆಗೆದುಕೊಂಡ ಬಳಿಕ ಯುವತಿ ಅನಾರೋಗ್ಯಕ್ಕೆ ಒಳಗಾದಾಗ ಯುವತಿಯನ್ನು ಆ ಸ್ಥಿತಿಯಲ್ಲಿ ಅಲ್ಲಿಯೇ ಬಿಟ್ಟು ಕಲ್ಯಾಣ ಪರಾರಿಯಾಗಿದ್ದಾನೆ. ಹೋಟೆಲ್ ಸಿಬ್ಬಂದಿಯೊಬ್ಬ ಕೊಠಡಿಯ ಬಾಗಿಲು ತೆರೆದು ನೋಡಿದರೆ ಯುವತಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದಳು. ಬಳಿಕ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಯುವತಿ ತನ್ನ ಹೆಸರು ಮತ್ತು ವಿಳಾಸ ತಿಳಿಸಿದ ಬಳಿಕ ಮೃತಪಟ್ಟಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ. ಈ ಪ್ರಕರಣ ಕುರಿತು ಮೃತ ಯುವತಿಯ ಪ್ರಿಯತಮ ಕಲ್ಯಾಣ ಗಾಗಿ ಹುಡುಕಾಟ ನಡೆದಿದೆ.

Leave a Reply

Your email address will not be published. Required fields are marked *