ಉಪವಾಸ ಸತ್ಯಾಗ್ರಹದ ನಡುವೆಯೇ ಹೊಟ್ಟೆ ತುಂಬಿಸಿಕೊಂಡ ಬಿಜೆಪಿ ಮುಖಂಡರು!

ನ್ಯೂಸ್ ಕನ್ನಡ ವರದಿ-(12.04.18): ಪ್ರತಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿವೆ ಎಂಬ ಕಾರಣದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ತನ್ನ ಸರಕಾರದ ವಿರುದ್ಧ ತಾನೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ತಾಣದಾದ್ಯಂತ ಟೀಕೆ ವ್ಯಕ್ತವಾಗಿದೆ. ಇದೀಗ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಂತೆಯೇ ಅದರ ಮಧ್ಯದಲ್ಲಿ ಬಿಜೆಪಿಯ ಇಬ್ಬರು ಮುಖಂಡರು ಹೊಟ್ಟೆ ತುಂಬಿಸಿಕೊಳ್ಳುವ ವೀಡಿಯೋವೊಂದು ಇದೀಗ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.

ಇಬ್ಬರು ಬಿಜೆಪಿ ಶಾಸಕರಾದ ಭೀಮ್ ರಾವ್ ತಕ್ಪೀರ್ ಹಾಗೂ ಸಂಜಯ್ ಭೆಗಾಡೆ ಎಂಬ ಇಬ್ಬರು ತಮ್ಮ ಉಪವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ವೀಡಿಯೋ ವೈರಲ್ ಆಗಿದೆ. ಪುಣೆಯ ಕೌನ್ಸಿಲ್ ಹಾಲ್ ನಲ್ಲಿ ನಡೆದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಈ ಇಬ್ಬರು ಶಾಸಕರು ತಮ್ಮ ಉಪವಾಸವನ್ನು ಲೆಕ್ಕಿಸದೇ ಸ್ಯಾಂಡ್ ವಿಚ್ ಮತ್ತು ಚಿಪ್ಸ್ ತಿನ್ನುವುದರಲ್ಲಿ ಮಗ್ನರಾಗಿದ್ದರು. ಇದನ್ನು ಕೆಲವರು ವೀಡಿಯೊ ಮಾಡಿದ್ದು, ಹಲವು ಟಿವಿ ಚಾನೆಲ್ ಗಳಲ್ಲೂ ಪ್ರಸಾರವಾಗಿದೆ. ಈ ವೀಡಿಯೋ ಬಿಜೆಪಿಯನ್ನು ಮುಜುಗರಕ್ಕೀಡಾಗಿಸಿದ್ದಂತೂ ನಿಜ.

Leave a Reply

Your email address will not be published. Required fields are marked *