ಸಿ.ಟಿ.ರವಿ ಹಿಂದುತ್ವಕ್ಕೆ ಮೋಸ ಮಾಡಿದ್ದಾರೆ, ಬಿಜೆಪಿ ಬಗ್ಗೆ ಮಾತನಾಡಲು ಹೇಸಿಗೆಯಾಗುತ್ತೆ!: ಮುತಾಲಿಕ್

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈ ಬಾರಿ ಶಿವಸೇನೆ ಪಕ್ಷದೊಂದಿಗೆ ರಾಜಕೀಯ ಪ್ರವೇಶ ಮಾಡುತ್ತಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಬಳಗ ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.

ದತ್ತ ಪೀಠ ಬಾಬಾ ಬುಡನ್ಗಿರಿ ವಿವಾದ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಈಚೆಗೆ ಶಾಖಾದ್ರಿ ಮೌಲ್ವಿ ನೇಮಕದೊಂದಿಗೆ ಹಿಂದು ವಿರೋಧಿ ನೀತಿಗೆ ಕಾರಣವಾಗಿದೆ. ಇದನ್ನು ತೀವ್ರ ವಿರೋಧಿಸುತ್ತೇನೆಂದು ಸ್ಪಷ್ಟಪಡಿಸಿದರು. ದತ್ತ ಪೀಠದ ಕುರಿತು ಮತ್ತೊಮ್ಮೆ ನ್ಯಾಯಾಲಯ ಮೊರೆ ಹೋಗಲಾಗುವದು. ಅಲ್ಲದೆ ಇದರ ನಿರ್ಲಕ್ಷ್ಯತನ ತೋರಿಸಿದ ಶಾಸಕ ಸಿ.ಟಿ. ರವಿ ತಮ್ಮ ಸ್ವಾರ್ಥ ಗೆಲುವಿನಿಂದ ಗಮನ ಹರಿಸದಿರುವದು ಹಿಂದುತ್ವಕ್ಕೆ ಮಾಡಿದ ಮೋಸವಾಗಿದೆ ಎಂದು ಮುತಾಲಿಕ್ ಸಿ.ಟಿ. ರವಿ ವಿರುದ್ಧ ಹರಿಹಾಯ್ದರು.

ಬಿಜೆಪಿ ಅವಮಾನ ಮಾಡಿದೆ ಬಿಜೆಪಿ ಬಗ್ಗೆ ಮಾತನಾಡಲು ಹೇಸಿಗೆ ಅನಿಸುತ್ತಿದೆ. ಹಿಂದುತ್ವಕ್ಕೆ ಅವಮಾನ ಮಾಡುವದಲ್ಲದೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವದಾಗಿ ಬೇಡಿಕೆ ಸಲ್ಲಿಸಿದ ಸಂದರ್ಭ ಯಾವದೇ ನಿರ್ಣಯ ಕೈಗೊಳ್ಳದೆ ನನ್ನ ನಿರ್ಲಕ್ಷ್ಯಕ್ಕೆ ಕಾರಣವಾಗುವಲ್ಲಿ ಕೆಲವರ ಕುತಂತ್ರವಿದೆ. ಒಟ್ಟಾರೆ ಬಿಜೆಪಿ ನನಗೆ ತುಂಬಾ ಅವಮಾನ ಮಾಡುವಲ್ಲಿ ಕಾರಣವಾಗಿದ್ದು, ಹಿಂದುತ್ವದ ರಾಜ್ಯ, ರಾಷ್ಟ್ರಕ್ಕಾಗಿ ಶಿವಸೇನೆಯನ್ನು ರಾಜ್ಯಕ್ಕೆ ತರುವದು ಅನಿವಾರ್ಯವಾಯಿತು ಎಂದು ಮುತಾಲಿಕ್ ತಿಳಿಸಿದರು. ಇದೇ ಸಂದರ್ಭ ಮಹಾದೇವಿ ಬಾಗಿ, ಬಸವರಾಜ ಗಾಯಕವಾಡ, ಗೋಪಾಲ ನಾಯಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *