‘ನೋಟ್ ಬ್ಯಾನ್’ ಪೂರ್ವ ತಯಾರಿಯಿಲ್ಲದೇ ಜಾರಿಗೊಂಡ ತಪ್ಪು ನಿರ್ಧಾರವಾಗಿದೆ: ರಘುರಾಮ್ ರಾಜನ್
ನ್ಯೂಸ್ ಕನ್ನಡ ವರದಿ-(13.04.18): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 500 ಮತ್ತು 1000ರೂ. ನೋಟುಗಳನ್ನು ನಿಷೇಧ ಮಾಡಿದ್ದು, ಬಳಿಕ ಈಗಲೂ ಸಾಮಾನ್ಯ ಜನಜೀವನ ಅಸ್ತ್ಯವಸ್ತವಾಗಿದೆ. ಈ ಕುರಿತು ಮಾತನಾಡಿದ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್, ನೋಟು ನಿಷೇಧವೆನ್ನುವ ಯೋಜನೆಯು ಪೂರ್ವ ತಯಾರಿಯಿಲ್ಲದೇ ಜಾರಿಗೊಳಿಸಿದ ಒಂದು ತಪ್ಪು ನಿರ್ಧಾರವಾಗಿದೆ. ಕೇಂದ್ರ ಸರಕಾರವು ನೋಟುಗಳನ್ನು ನಿಷೇಧಿಸುವ ಮುಂಚೆ ರಿಸರ್ವ್ ಬ್ಯಾಂಕ್ ನ ಅಭಿಪ್ರಾಯ ಕೇಳಿರಲಿಲ್ಲ ಎನ್ನುವುದು ಸುಳ್ಳು. ನಾನು ಗವರ್ನರ್ ಆಗಿದ್ದಾಗಲೇ ಈ ಕುರಿತು ಚರ್ಚೆ ನಡೆದಿದ್ದು, ನಾನು ಅದನ್ನು ನಿರಾಕರಿಸಿದ್ದೆ ಎಂದು ಅವರು ಹೇಳಿದ್ದಾರೆ.
ಕೇಂಬ್ರಿಡ್ಜ್ನ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯಿಕರಣದಿಂದಾಗಿ ಶೇ. 87.5ರಷ್ಟು ನೋಟುಗಳು ರದ್ದಿಯಾದವು. ಇಂಥ ನಿರ್ಧಾರವನ್ನು ಯಾವುದೇ ಹಣಕಾಸು ತಜ್ಞ ಒಪ್ಪುವುದಿಲ್ಲ ಎಂದರು. ಅಪನಗದೀಕರಣ’ದ ತೀರ್ಮಾನ ಪೂರ್ವ ತಯಾರಿ ಇಲ್ಲದೆಯೇ ಜಾರಿಗೊಂಡ ಒಂದು ತಪ್ಪು ನಿರ್ಧಾರ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.