ಜೈಶ್ರೀರಾಮ್ ಘೋಷಣೆ ಕೂಗಿ ಆಸೀಫಾಳನ್ನು ಅತ್ಯಾಚಾರ, ಕೊಲೆ ಮಾಡಿದ್ದು ಪಾಕಿಸ್ತಾನಿಗಳು: ಮ.ಪ್ರ ಬಿಜೆಪಿ ಅಧ್ಯಕ್ಷ
ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಈ ಕುರಿತು ಮಾತನಾಡಿದ ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಂದಕುಮಾರ್ ಸಿಂಗ್ ಚೌಹಾಣ್, ಇದು ಪಾಕಿಸ್ತಾನಿ ಏಜೆಂಟ್ ಗಳ ಕೆಲಸ. ಜೈಶ್ರೀರಾಮ್ ಎಂದು ಕೂಗುವ ಮೂಲಕ ಇಲ್ಲಿನ ಜನರ ನಡುವೆ ಭಿನ್ನತೆ ಸೃಷ್ಟಿಸುತ್ತಿದ್ದಾರೆ ಎಂಬ ವಿರೋಧಾಭಾಸದ ಹೇಳಿಕೆ ನೀಡಿದ್ದಾರೆ.
ಅತದಯಾಚಾರವೆಸಗುವ ಸಂದರ್ಭದಲ್ಲಿ ಜೈಶ್ರೀರಾಂ ಎಂದು ಘೋಷಣೆ ಕೂಗಿದ್ದಾರೆಂದು ಹೇಳಲಾಗುತ್ತಿದೆ. ಇದೆಲ್ಲವೂ ಪಾಕಿಸ್ತಾನಿಗಳ ಕೆಲಸವಾಗಿದೆ. ಪಾಕಿಸ್ತಾನದ ಏಜೆಂಟ್ ಗಳು ನಮ್ಮ ನಡುವೆ ಭಿನ್ನತೆ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ. ಜಮ್ಮುವಿನಲ್ಲಿ ಹಿಂದೂಗಳು ಇರುವುದೇ ಕಡಿಮೆ. ಹಿಂದೂಗಳನ್ನು ಬಾಯಿ ತೆರಯಲು ಕೂಡಾ ಬಿಡುತ್ತಿಲ್ಲ. ಇನ್ನು ಅವರು ಘೋಷಣೆ ಕೂಗಲು ಸಾಧ್ಯವೇ ಎಂದು ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಂದಕುಮಾರ್ ಸಿಂಗ್ ಚೌಹಾಣ್ ಹೇಳಿದ್ದಾರೆ.