ಕಾಮನ್ ವೆಲ್ತ್ ಗೇಮ್ಸ್: ಭಾರತದ ಪರ ಚಿನ್ನ ಗೆದ್ದ 15ರ ಹರೆಯದ ಬಾಲಕ ಅನೀಶ್!

ನ್ಯೂಸ್ ಕನ್ನಡ ವರದಿ-(13.04.18): ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಈಗಾಗಲೇ ಭಾರತ ತಂಡವು ಒಟ್ಟು 16 ಚಿನ್ನದ ಪದಕಗಳನ್ನು ಗಳಿಸಿದ್ದು, 16ನೇ ಪದಕವನ್ನು 15 ವರ್ಷದ ಬಾಲಕ ಅನೀಶ್ ಭಾನ್ವಾಲಾ ಕೊರಳಿಗೇರಿಸಿದ್ದಾರೆ. ಭಾರತವು ಒಟ್ಟು 16 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಕಳೆದ ನಾಲ್ಕು ವರ್ಷಗಳ ಹಿಂದೆ ಗ್ಲಾಸ್ಗೋ ಕಾಮನ್ ವೆಲ್ತ್ ಗೇಮ್ ನಲ್ಲಿ ಮಾಡಿದ ಸಾಧನೆಯನ್ನು ಹಿಂದಿಕ್ಕಿದೆ.

ಶೂಟಿಂಗ್ ಪುರುಷರ 25ಮೀಟರ್ ರ‍್ಯಾಪಿಂಡ್ ಫೈರ್ ಪಿಸ್ತೂಲು ಫೈನಲ್ಸ್ ವಿಭಾಗದಲ್ಲಿ 15ರ ಹರೆಯದ ಅನೀಶ್ ಬಾನ್ವಾಲಾ ಚಿನ್ನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪದಕ ಗೆದ್ದ ಅತಿ ಕಿರಿಯ ಭಾರತೀಯನೆಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಪ್ರಸಕ್ತ ಸಾಲಿನಲ್ಲೇ ಟೈಮ್ಸ್ ಆಫ್ ಇಂಡಿಯಾ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗೂ ಭಾಜನವಾಗಿರುವ ಅನೀಶ್, ಬೆಲ್ಮಂಟ್ ಶೂಟಿಂಗ್ ಕೇಂದ್ರದಲ್ಲಿ ಭರ್ಜರಿ ಪಾದರ್ಪಣೆಯನ್ನೇ ಮಾಡಿದ್ದಾರೆ.

Leave a Reply

Your email address will not be published. Required fields are marked *