2019ರ ಚುನಾವಣೆಯು ಇಸ್ಲಾಮ್ ಹಾಗೂ ಭಗವಾನ್ ನಡುವಿನ ಚುನಾವಣೆಯಾಗಿದೆ: ಉತ್ತರ ಪ್ರದೇಶ ಬಿಜೆಪಿ ಶಾಸಕ
ನ್ಯೂಸ್ ಕನ್ನಡ ವರದಿ(13-04-2018):2019ರ ಲೋಕಸಭೆ ಚುನಾವಣೆಯು ಇಸ್ಲಾಮ್ ಹಾಗೂ ಭಗವಾನ್ ನಡುವಿನ ಚುನಾವಣೆಯಾಗಿದೆಯೇ ಹೊರತು ಯಾವುದೇ ಪಕ್ಷದ ನಡುವಿನ ಚುನಾವಣೆಯಲ್ಲ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬಲ್ಲಿಯಾ ಎಂಬಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುರೇಂದ್ರ ಸಿಂಗ್ ಭಾಷಣದುದ್ದಕ್ಕೂ ಇಸ್ಲಾಮ್ ಧರ್ಮವನ್ನು ಅವಹೇಳನ ಮಾಡಿದರು. ವಿಪಕ್ಷಗಳು ರಾಷ್ಟ್ರ ವಿರೋಧಿಗಳಾಗಿದ್ದಾರೆ ಮಾತ್ರವಲ್ಲ ಹಿಂದೂ ವಿರೋಧಿಗಳಾಗಿದ್ದಾರೆ. 2019ರ ಚುನಾವಣೆಯು ಇಸ್ಲಾಮ್ ಹಾಗೂ ಭಗವಾನ್ ನಡುವಿನ ಚುನಾವಣೆಯಾಗಿದೆ. ಇದರಲ್ಲಿ ನಿಮಗೆ ಇಸ್ಲಾಮಿನ ಜಯ ಬೇಕೋ ಅಥವಾ ಭಗವಾನನ ಜಯ ಬೇಕೋ ನೀವೇ ನಿರ್ಣಯಿಸಿ ಎಂದು ಜನತೆಗೆ ಕರೆಯಿತ್ತರು.
ಉತ್ತರ ಪ್ರದೇಶ ಸಚಿವರು ಹಾಗೂ ಶಾಸಕರು ಕೇವಲ ಇಸ್ಲಾಮ್ ವಿರೋಧಿ ದೋರಣೆಯೇ ತಮ್ಮ ಅಭಿವೃದ್ಧಿ ಎಂದು ಭಾವಿಸಿರುವ ಹಾಗಿದೆ. ಸತತವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುತ್ತಿರುವ ರಾಜಕಾರಣಿಗಳ ಸಾಲಿಗೆ ಇದೀಗ ಮತ್ತೊರ್ವ ಉತ್ತರ ಪ್ರದೇಶದ ಶಾಸಕನ ಹೊಸ ಸೇರ್ಪಡೆಯಾಗಿದೆ ಎನ್ನಬಹುದು.