ಕರ್ನಾಟಕ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಪಕ್ಷಕ್ಕೆ ಪುನರುತ್ಥಾನ ನೀಡಲಿದೆ: ಕೆ.ಬಿ.ಕೋಳಿವಾಡ

ನ್ಯೂಸ್ ಕನ್ನಡ ವರದಿ(13-04-2018): ಕರ್ನಾಟಕದ ಮುಂಬರುವ ವಿಧಾನ ಸಭಾ ಚುನಾವಣೆಯು ಕಾಂಗ್ರೆಸ್ ಪಕ್ಷಕ್ಕೆ ಪುನರುತ್ಥಾನ ನೀಡಲಿದೆ ಎಂದು ವಿಧಾನ ಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

1977ರಲ್ಲಿ ಇಂದಿರಾ ಗಾಂಧಿ ಸೋಲನ್ನು ಅನುಭವಿಸಿದಾಗ ಕರ್ನಾಟಕವೇ ಅವರಿಗೆ ಅಧಿಕಾರವನ್ನು ದಕ್ಕಿಸಿದೆ. ಕಾಂಗ್ರೆಸ್ ಪಕ್ಷ ತೊಂದರೆಯಲ್ಲಿ ಇದ್ದಾಗಲೆಲ್ಲಾ ಕರ್ನಾಟಕವೇ ಪುನರುತ್ಥಾನವನ್ನು ನೀಡಿದೆ. ಅದೇ ರೀತಿ ಈ ಬಾರಿಯೂ ಕೂಡ ಕರ್ನಾಟಕದ ಚುನಾವಣೆಯು ಕಾಂಗ್ರೆಸ್ ಪುನರುತ್ಥಾನಕ್ಕೆ ದಿಕ್ಸೂಚಿಯಾಗಲಿದೆ ಎಂದರು.

2013ರ ವಿಧಾನ ಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಪಡೆದು ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೇರಲಿದೆ ಎಂದು ಕೆ.ಬಿ.ಕೋಳಿವಾಡ ಭವಿಷ್ಯ ನುಡಿದರು.

Leave a Reply

Your email address will not be published. Required fields are marked *