ಕ್ಷಮಿಸು ಮಗಳೇ., ನಿನ್ನಂಥವರಿಗೆ ಈ ದೇಶ ಸುರಕ್ಷಿತವಲ್ಲ: ಆಸಿಫಾ ಕುರಿತು ಕಮಲ್ ಹಾಸನ್ ಟ್ವೀಟ್
ನ್ಯೂಸ್ ಕನ್ನಡ.ವರದಿ(13-04-2018): ದೇಶಾದ್ಯಂತ ಚರ್ಚಿಸಲ್ಪಡುತ್ತಿರುವ ಜಮ್ಮುವಿನ ಕಥುವಾ ಎಂಬಲ್ಲಿ ನಡೆದ 8ರ ಬಾಲೆಯ ಕೊಲೆ ಪ್ರಕರಣವನ್ನು ಖಂಡಿಸಿ ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
‘ನೋವನ್ನು ಅರ್ಥ ಮಾಡಿಕೊಳ್ಳಲು ಸ್ವಂತ ಮಗಳೇ ಆಗಬೇಕೆ? ಒಬ್ಬ ವ್ಯಕ್ತಿಯಾಗಿ, ತಂದೆಯಾಗಿ ಹಾಗೂ ದೇಶದ ನಾಗರೀಕನಾಗಿ ನನಲ್ಲಿ ಕೋಪಬರುತ್ತಿದೆ. ನನ್ನನ್ನು ಕ್ಷಮಿಸು ಮಗಳೇ. ನಿನಗೆ ಈ ದೇಶವನ್ನು ಸುರಕ್ಷಿತ ಪ್ರದೇಶ ಮಾಡಲು ಸಾಧ್ಯವಾಗಲಿಲ್ಲ. ನಿನ್ನಂತಿರುವ ಭವಿಷ್ಯದ ಮಕ್ಕಳ ನ್ಯಾಯಕ್ಕಾಗಿ ನಾನು ಹೋರಾಡುತ್ತೇನೆ. ನಾವು ದುಃಖಪಡುತ್ತಿದ್ದೇವೆ, ನಿನ್ನನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಟ್ವೀಟ್ ಮಾಡಿರುವ ಕಮಲ್ ಹಾಸನ್ ದೇಶದ ಜನತೆಯಲ್ಲಿರುವ ಅಸಾಹಾಯಕತೆಯನ್ನು ಹೊರಹಾಕಿದ್ದಾರೆ.
ಟ್ವೀಟ್ ಮಾಡಿದ ಕೇವಲ ನಾಲ್ಕು ಗಂಟೆಗಳಲ್ಲಿ 5500 ರಿಟ್ವೀಟ್ ಗಳು ಹಾಗೂ 16000ಕ್ಕೂ ಅಧಿಕ ಲೈಕ್ ಬರುವ ಮೂಲಕ ಕಮಲ್ ಹಾಸನ್ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.