ಆರ್‌ಸಿಬಿಯನ್ನು ಸೋಲಿಸಲು ತನ್ನ ಹನಿಮೂನನ್ನೇ ಬಿಟ್ಟು ಬಂದ ಈ ಕ್ರಿಕೆಟಿಗ ಯಾರು ಗೊತ್ತೇ? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ಈಗಾಗಲೇ ಶುರುವಾಗಿದೆ. ತಂಡಗಳು ಗೆಲುವಿಗಾಗಿ ಹೊಸ ಹೊಸ ಪ್ರಯೋಗ ಮಾಡಲು ಶುರು ಮಾಡಿವೆ. ಜತೆಗೆ ಟೂರ್ನಿಯಲ್ಲಿ ಆಡಬೇಕು ಎಂದು ಕನಸು ಕಾಣುವ ಯುವ ಪ್ರತಿಭೆಗಳಿಗೆ ಇದೊಂದು ಅದ್ಭುತ ವೇದಿಕೆ.

ಸದ್ಯ ಆಸ್ಟ್ರೇಲಿಯಾದ ಆಟಗಾರನೋರ್ವ ಐಪಿಎಲ್‌‌ನಲ್ಲಿ ಆಡುವ ಉದ್ದೇಶದಿಂದ ಹನಿಮೂನ್‌ ತೊರೆದು ಭಾರತಕ್ಕೆ ಬಂದಿಳಿದಿದ್ದಾರೆ. ಹೌದು, ಆಸೀಸ್‌ ಆರಂಭಿಕ ಆಟಗಾರ ಆರೋನ್‌ ಫಿಂಚ್‌ ಕಳೆದ ಕೆಲ ದಿನಗಳ ಹಿಂದೆ ಮ್ಯಾರೇಜ್‌ ಆಗಿದ್ದು, ಅದಾದ ಬಳಿಕ ನೇರವಾಗಿ ಭಾರತಕ್ಕೆ ಬಂದಿದ್ದಾರೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಆರೋನ್ ಫಿಂಚ್ ಮೈದಾನಕ್ಕಿಳಿಯುತ್ತಿದ್ದು, ಮದುವೆ ಇದ್ದ ಕಾರಣ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಡಿಯಲು ಸಜ್ಜಾಗಿರುವ ಫಿಂಚ್‌ ಈಗಾಗಲೇ ಅಭ್ಯಾಸ ಸಹ ಆರಂಭಿಸಿದ್ದಾರೆ. ಆರೋನ್‌ ಫಿಂಚ್ ಏಪ್ರಿಲ್ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಐಪಿಎಲ್‌ನಲ್ಲಿ 65 ಪಂದ್ಯಗಳನ್ನು ಆಡಿರುವ ಫಿಂಚ್ ಈವರೆಗೆ 1604 ರನ್ ಗಳಿಸಿದ್ದಾರೆ.

ಮಾಹಿತಿ ಕೃಪೆ ಈನಾಡು ಕನ್ನಡ

Leave a Reply

Your email address will not be published. Required fields are marked *