ಆಸೀಫಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣ: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ-(13.04.18): ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿವೆ. ಪುಟ್ಟಪುಟ್ಟ ಮಕ್ಕಳ ಮೇಲೂ ದೌರ್ಜನ್ಯಗಳು ಮುಂದುವರಿಯುತ್ತಿವೆ. ಕುದುರೆ ಮೇಯಿಸಲು ಹೊರಟಿದ್ದ ಎಂಟು ವರ್ಷದ ಪುಟ್ಟ ಮಗು ಆಸೀಫಾಳನ್ನು ದೇವಸ್ಥಾನದ ಒಳಗೆ ಕೂಡಿ ಹಾಕಿ ಅತ್ಯಾಚಾರವೆಸಗಲಾಯಿತು. ಇನ್ನೊಂದೆಡೆ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರವೆಸಗಿದ್ದು, ಬಳಿಕ ಆ ಬಾಲಕಿಯ ತಂದೆಯನ್ನೂ ಲಾಕಪ್ ಡೆತ್ ಹೆಸರಿನಲ್ಲಿ ಕೊಲ್ಲಲಾಯಿತು.

ಬಾಲಿವುಡ್ ಸೇರಿದಂತೆ ಹಲವರು ಕ್ಷೇತ್ರಗಳ ಗಣ್ಯರು ಈ ಕುರಿತಾದಂತೆ ಧ್ವನಿಯೆತ್ತುತ್ತಿದ್ದಾರೆ. ಆದರೆ ನಮ್ಮ ಭವ್ಯ ಭಾರತದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೊದಿ ಮಾತ್ರ ಉಪವಾಸ ಆಚರಿಸಿಕೊಂಡು ಸುಮ್ಮನೆ ಕೂತಿದ್ದಾರೆ. ಸಿಕ್ಕ ಸಿಕ್ಕ ವಿಷಯಕ್ಕೆಲ್ಲಾ ಟ್ವೀಟ್ ಮಾಡುವ ಪ್ರಧಾನಿ ಮೋದಿ ಇನ್ನೂ ಈ ಕುರಿತು ಧ್ವನಿಯೆತ್ತಿಲ್ಲ. ಕ್ಷಮಿಸಿ… ಪ್ರಧಾನಿ ಈ ಕುರಿತು ಇನ್ನೂ ಮಾತನಾಡಿಲ್ಲ. ಮಾತನಾಡಿದಾಗ ನಾವು ನ್ಯೂಸ್ ಅಪ್ಡೇಟ್ ಮಾಡುತ್ತೇವೆ. ಧನ್ಯವಾದಗಳು.

Leave a Reply

Your email address will not be published. Required fields are marked *