ಪರವಿರೋಧ ರಾಜಕೀಯದ ಭಯದಿಂದ ಊರನ್ನೇ ತೊರೆದ ಆಸೀಫಾ ಕುಟುಂಬ!

ನ್ಯೂಸ್ ಕನ್ನಡ ವರದಿ(13-04-2018): 8ರ ಹರೆಯದ ತಮ್ಮ ಕುಟುಂಬದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯ ನಂತರ ರಾಜ್ಯದಲ್ಲಿ ಕೇಳಿಬಂದ ಪರ ವಿರೋಧ ರಾಜಕೀಯದಿಂದ ಹೆದರಿ ತಮ್ಮ ಊರಾದ ರಸನಾವನ್ನು ತೊರೆದು ಆಸಿಫಾ ಕುಟುಂಬವು ಪಲಾಯನ ಮಾಡಿದೆ.

ಆರೋಪಿಗಳೊಂದಿಗೆ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಕಥುವಾ ಪೋಲೀಸರ ಕ್ರಮವನ್ನು ಖಂಡಿಸಿ ಜಮ್ಮು ಬಾರ್ ಎಸೋಸಿಯೇಶನ್ ಬಂದ್ ಹಾಗೂ ಪ್ರತಿಭಟನೆಗೆ ಕರೆ ನೀಡಿದ್ದರೆ, ಹುರಿಯತ್ ಕಾನ್ಪರೆನ್ಸ್ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಇನ್ನೊಂದು ಕಡೆ ಆಡಳಿತ ರೂಢ ಸರಕಾರದ ಪಾಲುದಾರ ಪಕ್ಷವಾದ ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು ಆರೋಪಿಗಳ ಪರವಾಗಿ ರ್ಯಾಲಿ ಸಭೆಗಳನ್ನು ನಡೆಸುತ್ತಿದೆ. ಬಿಜೆಪಿ ಸಚಿವರ ಈ ಕ್ರಮದ ವಿರುದ್ಧ ಭೀಮ್ ಸಿಂಗ್ ಅವರ ಜಮ್ಮು ಕಾಶ್ಮೀರ ಪ್ಯಾಂಥರ್ಸ್ ಪಾರ್ಟಿ ಬೀದಿಗಿಳಿದಿದ್ದು, ಬಿಜೆಪಿ ಸಚಿವರನ್ನು ವಜಾ ಮಾಡುವಂತೆ ಆಗ್ರಹಿಸಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದೆ. ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮೀರ್ವಾಯ್ಝ್ ಉಮ್ಮರ್ ಫಾರೂಕ್ ಸರಕಾರವನ್ನು ಮೂಕ ಪ್ರೇಕ್ಷಕ ಎಂದು ಟೀಕಿಸುವ ಮೂಲಕ ಪ್ರತಿಭಟನಾ ಸಭೆಗಳನ್ನುಹಮ್ಮಿಕೊಂಡಿದೆ.

ಈ ಎಲ್ಲಾ ಬೆಳವಣಿಗಗಳಿಂದ ಹೆದರಿ ಆಸಿಫಾ ಕುಟುಂಬದವರು ತಮ್ಮ ಹುಟ್ಟೂರು ರಸನಾವನ್ನು ತೊರೆದು ಅಜ್ಞಾತಸ್ಥಳಕ್ಕೆ ಹೋಗಿದ್ದಾರೆ.

Leave a Reply

Your email address will not be published. Required fields are marked *