ಈಗ ಬಿಜೆಪಿಗರೇ ಭಾರತ ಬಿಟ್ಟು ತೊಲಗಿ ಎನ್ನುವಂಥ ಕಾಲ ಬಂದಿದೆ: ಮುಖ್ಯಮಂತ್ರಿ ಚಂದ್ರು
ನ್ಯೂಸ್ ಕನ್ನಡ ವರದಿ-(13.04.18): ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಜನವಿರೋಧಿ ಯೋಜನೆಗಳ ಮೂಲಕ ಕುಖ್ಯಾತಿ ಪಡೆದಿದೆ. ಈಗೀಗ ಜನಸಾಮಾನ್ಯರಲ್ಲಿ ಅಸಹನೆ ಹುಟ್ಟಲು ಪ್ರಾರಂಭವಾಗಿದ್ದು, ಹಲವರು ಈ ಕುರಿತಾದಂತೆ ಧ್ವನಿಯೆತ್ತಲು ಪ್ರಾರಂಭಿಸಿದ್ದಾರೆ. ಇದೀಗ ಈ ಕುರಿತು ಮಾತನಾಡಿದ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು, ಹಿಂದಿನ ಕಾಲದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುತ್ತಿದ್ದೆವು. ಆದರೆ ಈಗ ಬಿಜೆಪಿಗರೇ ಭಾರತ ಬಿಟ್ಟು ತೊಲಗಿ ಎಂದು ಹೇಳುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಸಂವಿಧಾನ ಉಳಿಸಿ, ಕೋಮುವಾದ ಅಳಿಸಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಬಿಜೆಪಿಗರೇ ದಯವಿಟ್ಟು ಭಾರತ ಬಿಟ್ಟು ತೊಲಗಿ ಜೆಡಿಎಸ್ ನವರೇ ಜಾತಿ ಬಿಟ್ಟು ತೊಲಗಿ, ಆದರೆ ಕಾಂಗ್ರೆಸ್ ಎಲ್ಲರನ್ನೂ ಒಂದಾಗಿ ಕರೆದೊಯ್ಯುತ್ತದೆ. ನಾವು ಇನ್ನುಮುಂದೆ ಮನೆಯ ಎದುರುಗಡೆ ನಾಯಿ ಇದೆ ಎಚ್ಚರಿಕೆ ಎಂಬ ಬೋರ್ಡ್ ಹಾಕುವ ಬದಲು ಬಿಜೆಪಿ ಇದೆ ಎಚ್ಚರಿಕೆ, ಜೆಡಿಎಸ್ ಇದೆ ಎಚ್ಚರಿಕೆ ಎಂಬ ಬೋರ್ಡ್ ಹಾಕಿಕೊಳ್ಳಬೇಕಾಗುತ್ತದೆ ಎಂದು ಹೇಳಿ ವಿವಾದವನ್ನೂ ಸೃಷ್ಟಿಸಿದ್ದಾರೆ.