ಅಬುಧಾಬಿ: ಟೀವಿ ವಾಲ್ಯೂಮ್ ಕಮ್ಮಿಮಾಡದೇ ಕಿರಿಕಿರಿ!; ರೂಮ್’ಮೇಟ್ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಯುನೈಟೆಡ್ ಅರಬ್ ಎಮರೇಟ್ಸ್ ನ ಅಬುಧಾಬಿಯಲ್ಲಿ ಕುಟುಂಬದ ಜವಾಬ್ದಾರಿ ಹೊತ್ತು ಬಂದ ಏಷ್ಯಾ ಮೂಲದ ಮೂವರು ಅನಿವಾಸಿ ಕಾರ್ಮಿಕರು ತಾವು ಕೆಲಸ ಮಾಡುವ ಕಂಪೆನಿ ಸಮೀಪವೇ ಶೇರಿಂಗ್ ನಲ್ಲಿ ಒಂದು ರೂಮ್ ಪಡೆದು ನೆಲೆಸತೊಡಗಿದ್ದರು. ಕಾರ್ಮಿಕರಿಗೆ ಕೆಲಸದ ಸಮಯ ಬೇರೆ ಬೇರೆ ಇರುತ್ತೆ, ರಾತ್ರಿ ಶಿಪ್ಟ್ ಇರುತ್ತೆ. ಹಾಗಾಗಿ ರಾತ್ರಿ ಶಿಪ್ಟಿನಲ್ಲಿರುವವರು ಬೆಳಗ್ಗಿನ ಸಮಯದಲ್ಲಿ ಬಂದು ನಿದ್ರಿಸಿ ವಿಶ್ರಾಂತಿ ಪಡೆಯುತ್ತಾರೆ.

ಅಬುಧಾಬಿಯಲ್ಲಿ ಆ ಮೂವರು ಕಾರ್ಮಿಕರಲ್ಲಿ ಒಬ್ಬನಿಗೆ ರಾತ್ರಿ ಶಿಪ್ಟಿನಲ್ಲಿ ಕೆಲಸಮಾಡಿ ಬಂದು ವಿಶ್ರಾಂತಿ ಪಡೆಯುತ್ತಿದ್ದರೆ ಮತ್ತೊಬ್ಬ ಕಾರ್ಮಿಕನಿಗೆ ರಜೆಯಿತ್ತು ಮತ್ತು ಆತ ಟೀವಿಯಲ್ಲಿ ಯಾವುದೋ ಕಾರ್ಯಕ್ರಮ ನೋಡುವುದರಲ್ಲಿ ಮಗ್ನನಾಗಿದ್ದ. ಆದರೆ ಆ ಸಂದರ್ಭದಲ್ಲಿ ನಿದ್ರಿಸಲು ಪ್ರಯತ್ನಿಸುತ್ತಿದ್ದ ಮತ್ತೊಬ್ಬ ಕಾರ್ಮಿಕ ಟೀವಿ ವಾಲ್ಯೂಮ್ ಕಮ್ಮಿಮಾಡಲು ಮನವಿ ಮಾಡುತ್ತಾನೆ. ನನಗೆ ಈ ಟೀವಿ ಸೌಂಡಿನಿಂದ ನಿದ್ರಿಸಲು ಸಾಧ್ಯವಿಲ್ಲ ದಯವಿಟ್ಟು ವಾಲ್ಯೂಮ್ ಕಮ್ಮಿಮಾಡು ಎಂದು ನಿರಂತರವಾಗಿ ಮನವಿ ಮಾಡಿದರೂ ಅವನು ಕೇಳದೇ ಇದ್ದಾಗ ಸಿಟ್ಟಿನಲ್ಲಿ ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ.

ಇದಾದ ನಂತರ ಅಬುಧಾಬಿ ಪೊಲೀಸರು ಕೊಲೆಗಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತಾನು ಮಾಡಿದ ಕೊಲೆಯನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಅನಿವಾಸಿ ಭಾರತೀಯರು ಹಲವಾರು ಮಂದಿ ಗಲ್ಫ್ ದೇಶದಲ್ಲಿ ಕೆಲಸಕ್ಕೆ ಹೋದಾಗ ಅಲ್ಲಿ ಒಂದು ರೂಮ್ ಪಡೆದು ಶೇರಿಂಗ್ ನಲ್ಲಿ ವಾಸಿಸುತ್ತಾರೆ, ಬೆಡ್ ಸ್ಪೇಸ್ ನಲ್ಲಿ ವಾಸಿಸುತ್ತಾರೆ.

ಹೀಗೆ ವಾಸಿಸುವವರು ಮೊದಲನೆಯದಾಗಿ ನಿಮ್ಮ ರೂಮಿನಲ್ಲಿರುವವರು ಯಾವ ದೇಶದವರು ಎಂಬುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ.

ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ನಮ್ಮನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಜನರಿದ್ದರೆ ಮೊದಲ ಪ್ರಾಶಸ್ತ್ಯ ನೀಡಿ.

ಕಠಿಣ ಕೆಲಸದ ನಂತರ ಸಿಗುವ ಸ್ವಲ್ಪ ಸಮಯದಲ್ಲಿ ರೂಮಿನಲ್ಲಿ ಟೀವಿ ನೋಡಿಯೋ ಹರಟೆ ಹೊಡೆದೊ ಸಮಯ ದೂಡಲು ಪ್ರಯತ್ನಿಸಿದಾಗ ರೂಮಿನಲ್ಧಿರುವವರು ನಮ್ಮನ್ನು ಅರ್ಥಮಾಡುವಂತಾಗಿರಬೇಕು.

ಕೆಲ ದೇಶದ ಜನರು ನಿಗೂಢ ಸ್ವಭಾವ ಹೊಂದಿರುತ್ತಾರೆ, ಒಮ್ಮಿಂದೊಮ್ಮೆಲೇ ಸಿಟ್ಟು ಮೈಮೇಲೆ ಬರುತ್ತದೆ, ಅಂಥವರಿಗೆ ನಮ್ಮೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಇರದ ಕಾರಣ, ಸ್ನೇಹವೂ ಇಲ್ಲದ ಕಾರಣ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಜಾಗೃತೆ ವಹಿಸುವುದು ಉತ್ತಮ.

ಶೇರಿಂಗ್ ರೂಮಿನಲ್ಲಿರುವವರು ಬೇರೆಯವರ ಕೆಲಸ ಸಮಯ ಮತ್ತು ವಿಶ್ರಾಂತಿಯ ಸಮಯವನ್ನು ಮನಸ್ಸಿನಲ್ಲಿಟ್ಟು ಅವರಿಗೂ ಸಹಕರಿಸಬೇಕು, ಇದರಿಂದ ಅವರೂ ನಮಗೆ ಸಹಕರಿಸುವರು.

Leave a Reply

Your email address will not be published. Required fields are marked *