ಪೋಕ್ಸೋ ಕಾಯಿದೆ ತಿದ್ದುಪಡಿ ಮೂಲಕ ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೆ: ಮೇನಕಾ ಗಾಂಧಿ
ನ್ಯೂಸ್ ಕನ್ನಡ ವರದಿ(13-04-2018): ಮಕ್ಕಳನ್ನು ಅತ್ಯಾಚಾರ ಮಾಡುವ ಅತ್ಯಾಚಾರಿಗಳಿಗೆ ಮರಣದಂಡನೆ ನೀಡುವಂತೆ ಪೋಕ್ಸೋ ಕಾಯಿದೆಗೆ ತಿದ್ದುಪಡಿ ಮಾಡಲಾಗುವುದೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ.
ಜಮ್ಮುವಿನ ಕಥುವಾ ಜಿಲ್ಲೆಯ ರಸನಾ ಎಂಬಲ್ಲಿ 8ರ ಹರೆಯದ ಆಸಿಫಾ ಎಂಬ ಬಾಲಕಿಯ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಮೇನಕಾ ಗಾಂಧಿ, 12 ವರ್ಷದೊಳಗಿನ ಮಕ್ಕಳನ್ನು ಅತ್ಯಾಚಾರ ಮಾಡುವವರಿಗೆ ಮರಣದಂಡನೆಯಂತಹ ಕಠಿನ ಶಿಕ್ಷೆ ನೀಡುವ ಸಲುವಾಗಿ ಪೋಕ್ಸೋ ಕಾಯಿದೆಗೆ ತಿದ್ದುಪಡಿ ಮಾಡಲಾಗುವುದು ಎಂದರು.
ಸುನ್ನಿ ಮುಸ್ಲಿಮ್ ಬುಡಕಟ್ಟು ಜನಾಂಗದವರು ಬೆಧರಿಸುವ ತಂತ್ರದ ಭಾಗವಾಗಿ ಸಾಂಜಿರಾಮ್ ಎಂಬವನ ನೇತೃತ್ವದಲ್ಲಿ ಆಸಿಫಾ ಎಂಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು.