ಕಾಮನ್ ವೆಲ್ತ್ ಗೇಮ್ಸ್: ಹೈಜಂಪ್ ನಲ್ಲಿ ಚಿನ್ನದ ಪದಕ ಗಳಿಸಿದ ಮಿಚೆಲ್ ಸ್ಟಾರ್ಕ್ ಸಹೋದರ!

ನ್ಯೂಸ್ ಕನ್ನಡ ವರದಿ-(13.04.18): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೆ, ಇನ್ನೊಂದೆಡೆ ಅವರ ಕಿರಿಯ ಸಹೋದರ ಬ್ರೆಂಡನ್ ಸ್ಟಾರ್ಕ್ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ತವರಿನಲ್ಲೇ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಕುರಿತಾದಂತೆ ಸಹೋದರ ಕ್ರಿಕೆಟರ್ ಮಿಚೆಲ್ ಸ್ಟಾರ್ಕ್ ಮತ್ತು ಐಸಿಸಿ ಟ್ವೀಟ್ ಮಾಡಿದೆ.

ಕಾಮನ್ ವೆಲ್ತ್ ಗೇಮ್ಸ್ ನ ಹೈಜಂಪ್ ವಿಭಾಗದಲ್ಲಿ ಸ್ಫರ್ಧಿಸಿದ ಮಿಚೆಲ್ ಸ್ಟಾರ್ಕ್ ಸಹೋದರ ಬ್ರೆಂಡನ ಸ್ಟಾರ್ಕ್ 2.32ಮೀಟರ್ ಎತ್ತರದಲ್ಲಿ ಜಿಗಿಯುವ ಮೂಲಕ ಮೊದಲ ಸ್ಥಾನ ಪಡೆದು ಚಿನ್ನದ ಪದಕವನ್ನು ಗಳಿಸಿಕೊಂಡರು. ಕಳೆದ ಗ್ಲಾಸ್ಗೋ ಕಾಮನ್ ವೆಲ್ತ್ ನಲ್ಲಿ ಹೈಜಂಪ್ ವಿಭಾಗದಲ್ಲಿ ಬ್ರೆಂಡನ್ ಸ್ಟಾರ್ಕ್ 8 ನೇ ಸ್ಥಾನವನ್ನು ಪಡೆದಿದ್ದು, ರಿಯೋ ಒಲಿಂಪಿಕ್ಸ್ ನಲ್ಲಿ 15ನೇ ಸ್ಥಾನವನ್ನು ಗಳಿಸಿದ್ದರು.

https://twitter.com/mstarc56/status/984041412831227905

Leave a Reply

Your email address will not be published. Required fields are marked *