ಆರೆಸ್ಸೆಸ್ ನವರಷ್ಟು ಭ್ರಷ್ಟಾಚಾರಿಗಳು ಯಾರೂ ಇಲ್ಲ, ಸುಮ್ಮನೇ ದೇಶಪ್ರೇಮವೆನ್ನುತ್ತಾರೆ: ಬಿಜೆಪಿ ಶಾಸಕ ಸುರೇಶ್ ಗೌಡ!
ನ್ಯೂಸ್ ಕನ್ನಡ ವರದಿ-(13.04.18): ಉಡುಪಿ ಅಷ್ಟಮಠದ ಸ್ವಾಮೀಜಿಗಳ ಕುರಿತಾದಂತೆ ಕುಟುಕು ಕಾರ್ಯಾಚರಣೆ ನಡೆಸುವ ಮೂಲಕ ಸ್ಫೋಟಕ ಸುದ್ದಿಯನ್ನು ಪ್ರಕಟಿಸಿದ್ದ ಕನ್ನಡದ ಖಾಸಗಿ ವಾಹಿನಿ ಬಿಟಿವಿ ಇದೀಗ ಇನ್ನೊಂದು ಸ್ಫೋಟಕ ಸುದ್ದಿಯನ್ನು ಬಯಲು ಮಾಡಿದೆ. ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿರುವ ಬಿಜೆಪಿ ಪಕ್ಷಕ್ಕೆ ಇದು ಬಹುದೊಡ್ಡ ಹೊಡೆತ ನೀಡಲಿದೆ ಎನ್ನುವುದು ಸುಳ್ಳಲ್ಲ. ತುಮಕೂರಿನ ಬಿಜೆಪಿ ಶಾಸಕ ಸುರೇಶ್ ಗೌಡರವರು ಕುಟುಕು ಕಾರ್ಯಾಚರಣೆಯಲ್ಲಿ ಕರ್ನಾಟಕ ಬಿಜೆಪಿ ಪಕ್ಷದ ಕುರಿತಾದಂತೆ ರಹಸ್ಯ ಮಾಹಿತಿಗಳನ್ನು ಬಯಲು ಮಾಡಿದ್ದಾರೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ಹಲವು ದಿನಗಳಿಂದ ಶೀತಲ ಸಮರ ನಡೆಯುತ್ತಿದೆ. ಅನಂತ್ ಕುಮಾರ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದೆಂಬ ಉದ್ದೇಶದಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ಆರ್. ಅಶೋಕ್ ಬಳಿ ತೆರಳಿ ನೀವೇ ಮುಂದಿನ ಮುಖ್ಯಮಂತ್ರಿ ಅನ್ನುತ್ತಾರೆ. ಹಲವು ಪ್ರಕರಣಗಳಲ್ಲಿ ಸಿಲುಕಿರುವ ಬಿಜೆಪಿ ಪಕ್ಷಕ್ಕೆ ಜನರು ಮತ ನೀಡುವುದಿಲ್ಲ. ನೂರು ಕೋಟಿಯಲ್ಲ 500 ಕೋಟಿ ರೂ. ಖರ್ಚು ಮಾಡಿದರೂ ಬಿಜೆಪಿ ಕರ್ನಾಟಕದಲ್ಲಿ ಗೆಲ್ಲುವುದಿಲ್ಲ ಎಂದು ಸುರೇಶ್ ಗೌಡ ಹೇಳಿದ್ದಾರೆ.
“ನಾನು ಯಡಿಯೂರಪ್ಪರವರಿಂದ ಹಣ ಪಡೆದುಕೊಂಡಿಲ್ಲ. ನನ್ನ ಕ್ಯಾಂಪೇನ್ ಗೆ ನಾನೇ ಹಣ ಹೂಡಿದ್ದೇನೆ. ಚಿಕ್ಕಮಗಲೂರಿನ ಸಿಟಿ ರವಿ ಯಡಿಯೂರಪ್ಪರವರ **** ಸಮಾನ. ಯಡಿಯೂರಪ್ಪರವರು ಜೈಲಿಗೆ ಹೊದ ಸಂದರ್ಭದಲ್ಲಿ ನಾನು ಕಣ್ಣೀರು ಹಾಕಿದ್ದೆ. ಆರೆಸ್ಸೆಸ್ ನವರಷ್ಟು ಭ್ರಷ್ಟರು ಬೇರೆ ಯಾರೂ ಇಲ್ಲ. ತಮ್ಮ ಪರವಾಗಿ ಸುದ್ದಿ ಪ್ರಕಟಿಸಲು ಹೊಸದಿಗಂತ ಪತ್ರಿಕೆಗೆ ಯಡಿಯೂರಪ್ಪ ಹಣ ನೀಡಿದ್ದರು. ಹೊಸದಿಗಂತ ಆರೆಸ್ಸೆಸ್ ಮುಖವಾಣಿಯಾಗಿದೆ. ಆರೆಸ್ಸೆಸ್ ನವರು ಅಡ್ವಾಣಿಯನ್ನೇ ಹೊಡೆದು ಬಿಟ್ಟಿದ್ದಾರೆ. ಅವರು ಸುಮ್ಮನೇ ದೇಶಪ್ರೇಮಿಗಳು ಎಂದು ಹೇಳುತ್ತಾರೆ” ಎಂದು ಸುರೇಶ್ ಗೌಡ ಕುಟುಕು ಕಾರ್ಯಾಚರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.
BJP MLASuresh Gowda speaking against RSS
ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಆರೆಸ್ಸೆಸ್ ವಿರುದ್ಧ ಮಾತನಾಡುತ್ತಿರುವುದು…. #SureshGowda #BJPvideo
Posted by News18 Kannada on Friday, April 13, 2018
video: newskannada18