ಒಂದೇ ಓವರ್ ನಲ್ಲಿ ಪಂಜಾಬ್ ತಂಡದ ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದ ಉಮೇಶ್ ಯಾದವ್!
ನ್ಯೂಸ್ ಕನ್ನಡ ವರದಿ-(13.04.18): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ವಿರುದ್ಧ ಸೋಲನ್ನಪ್ಪಿಕೊಂಡಿತ್ತು. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಉಮೇಶ್ ಯಾದವ್ ರ ಮಾರಕ ಬೌಲಿಂಗ್ ದಾಳಿಗೆ ಇದೀಗ ಪಂಜಾಬ್ ತಂಡವು ಆರಂಭಿಕ ಕುಸಿತ ಕಂಡಿದೆ.
ಕಳೆದ ಪಂದ್ಯದಂತೇ ಈ ಪಂದ್ಯದಲ್ಲೂ ಕನ್ನಡಿಗ ಕೆ,ಎಲ್ ರಾಹುಲ್ ಅಬ್ಬರಿಸಿದ್ದು, ಉಳಿದ ಬ್ಯಾಟ್ಸ್ ಮನ್ ಗಳು ಅವರಿಗೆ ಸಾಥ್ ನೀಡಲಿಲ್ಲ. ಮೂರನೇ ಓವರ್ ಎಸೆಯಲು ಬಂದ ಅನುಭವೀ ಬೌಲರ್ ಉಮೇಶ್ ಯಾದವ್ ಮೂರು ವಿಕೆಟ್ ಗಳನ್ನು ಕಬಳಿಸಿದರು. ಪಂಜಾಬ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಮಯಾಂಕ್ ಅಗರ್ ವಾಲ್, ಆರೊನ್ ಫಿಂಚ್ ಹಾಗೂ ಯುವರಾಜ್ ಸಿಂಗ್ ವಿಕೆಟ್ ಗಳನ್ನು ಕಿತ್ತ ಉಮೇಶ್ ಯಾದವ್ ಪಂಜಾಬ್ ತಂಡದ ಓಟಕ್ಕೆ ಕಡಿವಾಣ ಹಾಕಿದ್ದಾರೆ.