ಕೇವಲ 1 ವಿಕೆಟ್ ಪಡೆದರೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಶೀದ್ ಖಾನ್! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ನಿನ್ನೆ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ರಶೀದ್ ಖಾನ್ ಕೇವಲ 1 ವಿಕೆಟ್ ಪಡೆದರೂ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾರೆ. ಪಂದ್ಯದಲ್ಲಿ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿದ್ದರು. 4 ಓವರ್ ನಲ್ಲಿ 13 ರನ್ ನೀಡಿದ್ದರು. ಇವರ ಬಾಲಿಗೆ ರನ್ ಗಳಿಸಲು ಮುಂಬೈ ಆಟಗಾರರು ಪರದಾಡಿದ್ದರು. 24 ಎಸೆತಗಳ ಪೈಕಿ 18 ಬಾಲಿಗೆ ಯಾವುದೇ ರನ್ ಬಂದಿರಲಿಲ್ಲ. ರಶೀದ್ ಖಾನ್ 2 ಬೌಂಡರಿ ಮತ್ತು ಒಂದು ವೈಡ್ ಮಾತ್ರ ನೀಡಿದ್ದರು. ಪಂದ್ಯದಲ್ಲಿ ರಶೀದ್ ಖಾನ್ 3.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ರನ್ನಿಗೆ ಕಡಿವಾಣ ಹಾಕಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‍ಗಳಿಸಿತ್ತು. 148 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಂದ್ಯ ಗೆದ್ದಿತ್ತು. ಕೊನೆಯ ಓವರ್ ನಲ್ಲಿ 11 ರನ್ ಬೇಕಿತ್ತು. ಕಟ್ಟಿಂಗ್ ಎಸೆದ ಮೊದಲ ಎಸೆತವನ್ನು ಹೂಡ ಸಿಕ್ಸರ್ ಗೆ ಅಟ್ಟಿದ್ದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂದ ಕಾರಣ ಹೈದರಾಬಾದ್ ತಂಡ ಜಯಗಳಿಸಿತು.

ಸನ್‍ರೈಸರ್ಸ್ ಪರ ಸಂದೀಪ್ ಶರ್ಮಾ, ಸ್ಟ್ಯಾನ್‍ಲೇಕ್, ಕೌಲ್ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಕೀಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು. ಡಾಟ್ ಬಾಲ್ ಟಿಟ್ವೆಂಟಿ ಕ್ರಿಕೆಟ್‌ನಲ್ಲಿ ತುಂಬಾ ತುಂಬಾ ಬೆಲೆಯಿದೆ ಹಾಗಾಗಿ ಕೇವಲ ಒಂದು ವಿಕೆಟ್ ಪಡೆದರೂ 18 ಚುಕ್ಕಿ ಎಸೆತದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿ ರಶೀದ್ ಖಾನ್ ಪಾಲಾಗಿತ್ತು.

Leave a Reply

Your email address will not be published. Required fields are marked *