ಕ್ಯಾನ್ಸರ್ ನಿಂದ ಸಾಯಲಿದ್ದೇನೆ ಎಂದಿದ್ದ ಈ ಬಾಲಿವುಡ್ ನಟ ಬಿಚ್ಚಿಟ್ಟ ಆಘಾತಕಾರಿ ಸುದ್ದಿ ಓದಿ..
ನ್ಯೂಸ್ ಕನ್ನಡ ವರದಿ: ಬಾಲಿವುಡ್ ನಿರ್ಮಾಪಕ, ನಟ, ನಿರ್ದೇಶಕ ಹಾಗೂ ಬಾಕ್ಸ್ ಆಫೀಸ್ ತಜ್ಞ ಕಮಾಲ್ ರಶೀದ್ ಖಾನ್ ಕೆಲ ದಿನದ ಹಿಂದೆ ತನಗೆ 3ನೇ ಹಂತದ ಹೊಟ್ಟೆಯ ಕ್ಯಾನ್ಸರ್ ಇರುವುದಾಗಿ ಮತ್ತು ತಾನು ಚಿಕಿತ್ಸೆ ಮಾಡಿಯೂ ಒಂದು ವರ್ಷದೊಳಗಡೆ ಸಾಯಲಿರುವುದಾಗಿ ಭಾವನಾತ್ಮಕ ಟ್ವೀಟ್ ಮಾಡಿದ್ದರು, ಇದು ಇಡೀ ಬಾಲಿವುಡ್ ಇಂಡಸ್ಟ್ರಿಯನ್ನೇ ತಲ್ಲಣಗೊಳಿಸಿತ್ತು.
ಆದರೆ ಇದೀಗ ಕಮಾಲ್ ರಶೀದ್ ಖಾನ್ ಆಘಾತಕಾರಿ ವಿಷಯ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ‘ತನಗೆ 3ನೇ ಹಂತದ ಕ್ಯಾನ್ಸರ್ ಇರುವುದಾಗಿ ಒಂದು ಆಸ್ಪತ್ರೆ ರಿಪೋರ್ಟ್ ನೀಡಿತ್ತು, ಆದರೆ ಇದೀಗ ಮೂರು ಬೇರೆ ಆಸ್ಪತ್ರೆಗಳಲ್ಲಿ ಸರಿಯಾಗಿ ಮತ್ತೊಮ್ಮೆ ಪರೀಕ್ಷಿಸಿದ ನಂತರ ತಿಳಿದು ಬಂದದ್ದೇನೆಂದರೆ ನನಗಿರುವ ಹೊಟ್ಟೆಯ ಕ್ಯಾನ್ಸರ್ ಮೊದಲ ಹಂತದಲ್ಲಿದೆ, ಮತ್ತು ಅದು ಸಂಪೂರ್ಣವಾಗಿ 6 ತಿಂಗಳಲ್ಲಿ ಗುಣಮುಖವಾಗಲಿದೆ, ಮೊದಲು ರಿಪೋರ್ಟ್ ನೀಡಿದ ಆಸ್ಪತ್ರೆಯ ವರದಿ ತಪ್ಪಾಗಿದೆ ಎಂಬುವುದನ್ನು ಮೂರು ಬೇರೆ ಆಸ್ಪತ್ರೆಗಳ ವರದಿ ಖಚಿತಪಡಿಸಿದೆ’ ಎಂದು ಹೇಳಿದ್ದಾರೆ.
ಇಂತಹ ಮಾರಕ ರೋಗಗಳ ಬಗ್ಗೆ ರಿಪೋರ್ಟ್ ಬಂದಾಗ ಕೇವಲ ಒಂದೇ ಆಸ್ಪತ್ರೆಯ ವರದಿಯನ್ನೇ ಅಂತಿಮ ಎಂದು ನಂಬಬೇಡಿ, ಒಂದೇ ವರದಿ ನಂಬಿ ಅವರು ನೀಡುವ ದುಬಾರಿ ಚಿಕಿತ್ಸೆಯ ಷಡ್ಯಂತ್ರಕ್ಕೆ ಬಲಿಯಾಗಬೇಡಿ, ಬೇರೆ ಬೇರೆ ಆಸ್ಪತ್ರೆಯಿಂದ ಪರಿಶೀಲಿಸಿ ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಿ ಎಂದು ಪ್ರಮುಖ ಸಲಹೆಯನ್ನೂ ಅವರು ನೀಡಿದ್ದಾರೆ.