ಜೆಡಿಎಸ್ ಪಲಿಮಾರು ಸ್ಥಾನೀಯ ಸಮಿತಿ ಅಧ್ಯಕ್ಷ ಪಕ್ಷಕ್ಕೆ ರಾಜೀನಾಮೆ
ನ್ಯೂಸ್ ಕನ್ನಡ ವರದಿ-(13.04.18): ಪಡುಬಿದ್ರಿ: ಜೆಡಿಎಸ್ ಪಕ್ಷದ ಪಲಿಮಾರು ಸ್ಥಾನೀಯ ಸಮಿತಿ ಅಧ್ಯಕ್ಷ ಹುಸೇನ್ ಪಲಿಮಾರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ನಾನು ಕಾರ್ಯಕರ್ತನಾಗಿದ್ದು, ಪಲಿಮಾರು ಸ್ಥಾನೀಯ ಸಮಿತಿ ಅಧ್ಯಕ್ಷನಾಗಿದ್ದೇನೆ.ಇದೀಗ ನನಗೆ ನನ್ನ ವೈಯುಕ್ತಿಕ ವಿಚಾರದಿಂದಾಗಿ ಪಕ್ಷ ತೊರೆಯಬೇಕಾಗಿದೆ.ಈ ನಿಟ್ಟಿನಲ್ಲಿ ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ಕಳುಹಿರುವುದಾಗಿ ಹೇಳಿದ ಹುಸೇನ್, ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಇದುವರೆಗೆ ನಿರ್ಧರಿಸಿಲ್ಲ ಎಂದಿದ್ದಾರೆ.