ಕಾಮನ್ ವೆಲ್ತ್ ಗೇಮ್ಸ್: ಭಾರತದ ಪರ ಚಿನ್ನಗೆದ್ದ ಬಾಕ್ಸರ್ ಮೇರಿ ಕೋಮ್!

ನ್ಯೂಸ್ ಕನ್ನಡ ವರದಿ-(14.04.18): ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ಭಾರತದ ಕ್ರೀಡಾಳುಗಳು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ಪುರುಷರ 50 ಮೀ. ರೈಫಲ್‌ 3 ಪೊಜಿಷನ್‌ ವಿಭಾಗದಲ್ಲಿ ಶೂಟರ್‌ ಸಂಜೀವ್‌ ರಜಪೂತ್‌ ಬಂಗಾರದ ಪದಕ ಗೆದ್ದಿದ್ದಾರೆ.

48 ಕೆಜಿ ಮಹಿಳೆಯರ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ನ ಕ್ರಿಸ್ಟೀನಾ ಒ’ಹರ ಅವರನ್ನು ಮಣಿಸುವ ಮೂಲಕ ಮೇರಿ ಕೂಮ್ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಮೂಲಕ ಭಾರತಕ್ಕೆ 18ನೇ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದಾರೆ. ಇನ್ನು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದು ಮೇರಿ ಕೂಮ್ ಅವರ ಮೊದಲ ಚಿನ್ನದ ಪದಕವಾಗಿದೆ.

Leave a Reply

Your email address will not be published. Required fields are marked *