ನೀನು ಭಾರತೀಯಳಾಗಿ ಉಳಿದಿಲ್ಲ ಎಂದಾತನಿಗೆ ಭರ್ಜರಿ ತಿರುಗೇಟು ನೀಡಿದ ಸಾನಿಯಾ ಮಿರ್ಜಾ!

ನ್ಯೂಸ್ ಕನ್ನಡ ವರದಿ-(14.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು ಇದೀಗ ಈ ಪ್ರಕರಣದ ಕುರಿತಾದಂತೆ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವ, ನೀವಿನ್ನೂ ಭಾರತೀಯರಾಗಿ ಉಳಿದಿಲ್ಲ ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಗೆ ಸಾನಿಯಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸಾನಿಯಾ, “ಜಗತ್ತಿನ ಮುಂದೆ ನಾವು ಇಂತಹ ಒಂದು ದೇಶವೆಂದು ಅನಿಸಿಕೊಳ್ಳಬೇಕೆಂದು ಬಯಸುತ್ತಿದ್ದೇವೆಯೇ?, ನಮ್ಮ ಜಾತಿ, ವರ್ಣ, ಧರ್ಮ ಹಾಗೂ ಲಿಂಗವನ್ನು ಮರೆತು ಈ ಎಂಟರ ಬಾಲೆಗಾಗಿ ನಾವಿಂದು ಎದ್ದು ನಿಲ್ಲದೇ ಇದ್ದರೆ ನಾವು ಈ ಜಗತ್ತಿನಲ್ಲಿ ಯಾವುದೇ ವಿಚಾರಕ್ಕೂ ಎದ್ದು ನಿಲ್ಲುವವರಾಗುವುದಿಲ್ಲ. ಕನಿಷ್ಠ ಮಾನವತೆಗೂ ಕೂಡ. ನನಗೆ ಅಸಹನೆ ಮೂಡುತ್ತಿದೆ” ಎಂದು ಸಾನಿಯಾ ಟ್ವೀಟ್ ಮಾಡಿದ್ದರು.

ಸಾನಿಯಾ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆಯಾದರೂ, ಕಿಚು ಕನ್ನನ್ ನಮೋ ಎಂಬ ಟ್ವಿಟರ್ ಖಾತೆದಾರರು, ನಿಮ್ಮ ಎಲ್ಲ ಗೌರವಗಳೊಂದಿಗೆ, ಮೇಡಂ, ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಒಬ್ಬ ಪಾಕಿಸ್ತಾನಿಯನ್ನು ವಿವಾಹವಾಗಿದ್ದೀರಿ. ನೀವು ಈಗ ಭಾರತೀಯರಲ್ಲ. ನಿಮಗೆ ಟ್ವೀಟ್ ಮಾಡಬೇಕೆಂದಿದ್ದರೆ, ಪಾಕ್ ಉಗ್ರ ಸಂಘಟನೆಗಳಿಂದ ಹತರಾದ ಮುಗ್ಧರ ಬಗ್ಗೆ ಟ್ವೀಟ್ ಮಾಡಿ” ಎಂದು ಟ್ವೀಟ್ ಮಾಡಿ ಸಾನಿಯಾ ಕಾಲೆಳೆಯು ಪ್ರಯತ್ನ ಮಾಡಿದ್ದರು.

ಆದರೆ ಅವರ ಟ್ವೀಟ್ ಗೆ ಅವರದೇ ಧಾಟಿಯಲ್ಲಿ ಉತ್ತರ ನೀಡಿರುವ ಸಾನಿಯಾ, ಮೊದಲನೆಯದಾಗಿ ಮದುವೆ ಎಂಬುದು ವೈಯುಕ್ತಿಕ ವಿಚಾರ, ಎರಡನೆಯದಾಗಿ ನಿಮ್ಮಂತಹ ಕೀಳು ಜೀವಗಳು ನಾನು ಯಾವ ದೇಶಕ್ಕೆ ಸೇರಿದವಳು ಎಂದು ಹೇಳುವ ಹಾಗಿಲ್ಲ. ನಾನು ಭಾರತಕ್ಕಾಗಿ ಆಡುತ್ತೇನೆ, ನಾನೊಬ್ಬಳು ಭಾರತೀಯಳು ಹಾಗೂ ಮುಂದೆಯೂ ಭಾರತೀಯಳಾಗಿಯೇ ಇರುತ್ತೇನೆ. ನೀವು ಧರ್ಮ ಹಾಗೂ ದೇಶದ ಪರಿಧಿಯನ್ನು ದಾಟಿ ನೋಡಿದರೆ ನೀವು ಕೂಡ ಮಾನವತೆಗಾಗಿ ಎದ್ದು ನಿಲ್ಲುತ್ತೀರಿ” ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

twt cst: kannadaprabha

Leave a Reply

Your email address will not be published. Required fields are marked *