ನೀವು ನನ್ನನ್ನು ವಿರೋಧಿಸಿದಷ್ಟು ನಾನು ಪ್ರಬಲನಾಗುತ್ತೇನೆ: ಪ್ರಕಾಶ್ ರೈ

ನ್ಯೂಸ್ ಕನ್ನಡ ವರದಿ-(14.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಕುರಿತಾದಂತೆ ದಕ್ಷಿಣಭಾರತದ ಖ್ಯಾತ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಕಲಬುರಗಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಮಾತನಾಡಿದರು. ನನ್ನ ವಿರುದ್ಧ ಘೋಷಣೆ ಕೂಗಿದರೆ ನಾನು ಮತ್ತಷ್ಟು ಪ್ರಬಲನಾಗುತ್ತೇನೆ. ಘೋಷಣೆಗಳ ಮೂಲಕ ನನ್ನ ಧೈರ್ಯಗೆಡಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಪ್ರಕಾಶ್ ರೈಯವರು ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು. ಹೆಲಿಕಾಪ್ಟರ್ ನಿಂದ ಇಳಿದು ಬರುವ ವೇಳೆ ಪ್ರಕಾಶ್ ರೈ ಕಾರಿಗೆ ಕೆಲವರು ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಈ ಕುರಿತು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು, ಈ ರೀತಿ ಘೋಷಣೆ ಕೂಗಲು ನಾನು ಮಾಡಿದ್ದಾದರೂ ಏನು? ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವುದು ತಪ್ಪಾ? ಅವರು ಅಧಿಕಾರಕ್ಕೆ ಬಂದು ಕೆಲವೇ ವರ್ಷಗಳು ಆಗಿದೆಯಷ್ಟೇ. ದೌರ್ಜನ್ಯ, ಕ್ರಮಿನಲ್ ಕೃತ್ಯಗಳು ಜಾಸ್ತಿಯಾಗಿವೆ. ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುತ್ತಿದ್ದಾರೆ. ಆದರೆ ಕರ್ನಾಟಕದ ಜನತೆಯನ್ನು ಹೆಚ್ಚುದಿನ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *