ತೊಗಾಡಿಯ ಬೆಂಬಲಿಗರಿಂದ ವಿಹಿಂಪ ಕಚೇರಿಯಲ್ಲಿ ದಾಂಧಲೆ: ವಿಹಿಂಪ ಕಾರ್ಯದರ್ಶಿ ಆರೋಪ!
ನ್ಯೂಸ್ ಕನ್ನಡ ವರದಿ(14-04-2018): ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಸಮರ್ಥಕರು ವಿಶ್ವ ಹಿಂದೂ ಪರಿಷತ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ವಿಹಿಂಪ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗಂಭೀರ ಆರೋಪ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಚುನಾವಣೆಯನ್ವು ಎದುರಿಸಲಾಗದೆ ಹತಾಸೆಯಿಂದ ತೊಗಾಡಿಯಾ ಈ ಕೆಲಸವನ್ನು ಮಾಡಿದ್ದಾರೆ. ಅಧ್ಯಕ್ಷ ಚುನಾವಣೆಯಲ್ಲಿ ದಿಲ್ಲಿ ಕಡೆಯಿಂದ ಬರುವವರನ್ನು ಬೆಧರಿಸುವ ತಂತ್ರದ ಭಾಗವಾಗಿ ತೊಗಾಡಿಯಾ ತನ್ನ ಬಂಟರಿಂದ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಚಂಪತ್ ರಾಯ್ ಆರೋಪಿಸಿದ್ದಾರೆ.
ಆದರೆ ವಿಹಿಂಪ ಪ್ರಧಾನ ಕಾರ್ಯದರ್ಶಿಯವರು ಮಾಡಿದ ಆಪಾದನೆಗಳನ್ನು ಪ್ರವೀಣ್ ತೊಗಾಡಿಯಾ ನಿರಾಕರಿಸಿದ್ದಾರೆ ಮಾತ್ರವಲ್ಲ ಯಾರೋ ನಾಲ್ಕು ಜನ ಕೆ.ಆರ್.ಪುರಂನಲ್ಲಿರುವ ಕಚೇರಿಗೆ ನುಗ್ಗಲು ಪ್ರಯತ್ನಿಸಿದಾಗ ಕಾವಲುಗಾರನು ಅವರನ್ನು ತಡೆದಿದ್ದಾನೆ ಅಷ್ಟೆ ಎಂದು ಅವರು ಪ್ರತಿಕ್ರಯಿಸಿದ್ದಾರೆ. 1964ರಲ್ಲಿ ಸ್ಥಾಪನೆಯಾದ ವಿಹಿಂಪದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಾಳೆ ನಡೆಯಲಿರುವ ವಿಹಿಂಪ ಅಧ್ಯಕ್ಷರ ಚುನಾವಣೆಯಲ್ಲಿ ಪ್ರವೀಣ್ ತೊಗಾಡಿಯಾ, ರಾಘವ ರೆಡ್ಡಿ ಹಾಗೂ ನಿವೃತ ನ್ಯಾಯ ಮೂರ್ತಿ ವಿ.ಹೆಚ್.ಕೋಕಡೆ ಸ್ಪರ್ಧಿಸುತ್ತಿದ್ದಾರೆ.