ಆಸಿಫಾ ರೇಪ್ ಆ್ಯಂಡ್ ಮರ್ಡರ್ ಪ್ರಕರಣ: ಆರೋಪಿಗಳ ಬೆಂಬಲಿಸಿದ್ದ ಬಿಜೆಪಿ ಸಚಿವರ ರಾಜಿನಾಮೆ!
ನ್ಯೂಸ್ ಕನ್ನಡ ವರದಿ(14-04-2018): ಬಿಜೆಪಿ ಪಕ್ಷವು ಆಸಿಫಾ ರೇಪ್ ಆ್ಯಂಡ್ ಮರ್ಡರ್ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸಿದ ಬಿಜೆಪಿ ಸಚಿವರ ವಿರುದ್ಧ ಕ್ರಮ ಜರುಗಿಸಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಬಿಜೆಪಿಯ ಮಿತ್ರ ಪಕ್ಷ ಪಿಡಿಪಿಯ ಅಧ್ಯಕ್ಷೆ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಒತ್ತಾಯಿಸಿದ ನಂತರ ಬಿಜೆಪಿಯ ಇಬ್ಬರು ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಜಮ್ಮುವಿನ ಕಥುವಾದಲ್ಲಿ ನಡೆದ ಬಾಲಕಿಯ ಕೊಲೆ ಪ್ರಕರಣದ ನಂತರ ಆರೋಪಿಗಳಿಗೆ ಪರವಾಗಿ ನಡೆದ ಸಮಾರಂಭದಲ್ಲಿ ಭಾವಹಿಸುವ ಮೂಲಕ ಮೆಹಬೂಬ ಮುಫ್ತಿ ಸಚಿವ ಸಂಪುಟದ ಮಂತ್ರಿಗಳಾದ ಪ್ರಕಾಶ್ ಗಂಗಾ ಹಾಗೂ ಲಾಲ್ ಸಿಂಗ್ ಭಾಗವಹಿಸುವ ಮೂಲಕ ಸರಕಾರವನ್ನು ಮುಜುಗರಕ್ಕೀಡು ಮಾಡಿದ್ದರು. ನಂತರ ಈ ಇಬ್ಬರು ಸಚಿವರ ರಾಜೀನಾಮೆಗೆ ವ್ಯಾಪಕ ಒತ್ತಾಯಗಳು ಕೇಳಿಬಂದಿದ್ದವು.
ಜಮ್ಮುವಿನ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ ಸಚಿವರಾದ ಚಂದ್ರ ಪ್ರಕಾಶ್ ಗಂಗಾ ಹಾಗೂ ಲಾಲ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ತಮ್ಮ ರಾಜಿನಾಮೆಯನ್ನು ನೀಡಿದ್ದಾರೆ ಎಂದು ಜಮ್ಮು ಕಾಶ್ಮೀರ ರಾಜ್ಯ ಬಿಜೆಪಿ ಅಧ್ಯಕ್ಷರಾದ ಸತ್ ಶರ್ಮ ಹೇಳಿದ್ದಾರೆ.