ಸಾರಿಗೆ ನೌಕರರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ; ಸರ್ಕಾರ ಅವರೊಂದಿಗೆ ವರ್ತಿಸುತ್ತಿರುವ ಧೋರಣೆ ಸರಿಯಲ್ಲ, ಕೂಡಲೇ ನೌಕರರನ್ನು ಕರೆದು ಸರಕಾರ ಮಾತನಾಡಲಿ: ಡಿಕೆಶಿ
ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೋಳಿ ಗೆಲ್ಲಿಸಲು ಕಾಂಗ್ರೆಸ್ ನಾನಾ ತಂತ್ರಗಳನ್ನ ಹೆಣೆಯುತ್ತಿದೆ. ಅಭ್ಯರ್ಥಿಯ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಘಟಾನು ಘಟಿ ನಾಯಕರು ಬೆಳಗಾವಿಯಲ್ಲೆ ಬೀಡು ಬಿಟ್ಟಿದ್ದು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇಂದು ಸಹ ಬೆಳಗಾವಿ ಕಾಂಗ್ರೇಸ್ ಕಛೇರಿಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಚುನಾವಣಾ ರಣತಂತ್ರದ ಕುರಿತು ಸಭೆ ನಡೆಸಿದ್ದಾರೆ.
ಅಭೆಯಲ್ಲಿ ಚುನಾವಣಾ ಪ್ರಚಾರದ ಕುರಿತು ಚರ್ಚೆ ನಡೆಸಿದ್ದು ಸಭೆಯಲ್ಲಿ ಶಾಸಕರಾದ ರಾಮಲಿಂಗಾ ರೆಡ್ಡಿ, ಅಂಜಲಿ ನಿಂಬಾಳ್ಕರ, ಎಚ್.ಎಂ. ರೇವನ್ನ, ಎಂ.ಬಿ ಪಾಟೀಲ್, ಮಾಜಿ ಮಂತ್ರಿ ಪ್ರಕಾಶ ಹುಕ್ಕೇರಿ ಸೇರಿದಂತೆ ಹಲವು ನಾಯಕರು ಹಾಗೂ ಉಸ್ತುವಾರಿಗಳ ಜೋತೆ ಸಭೆ ನಡೆಸಿ ಜವಾಬ್ದಾರಿಗಳನ್ನ ಹಂಚಿಕೆ ಮಾಡಿ ಮಾಡಿದ್ದಾರೆ.
ಇನ್ನು ಸಭೆ ವೇಳೆ ಮಾಧ್ಯಮಗಳ ಜೋತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ವಿರುದ್ದ ಹರಿ ಹಾಯ್ದಿದ್ದಾರೆ ಮತ್ತೊಮ್ಮೆ ಸಾರಿಗೆ ನೌಕರ ಮುಷ್ಕರಕ್ಕೆ ಕಾಂಗ್ರೇಸ್ ಪಕ್ಷದ ಬೆಂಬಲ ಇದ್ದು ಅವರ ಹೋರಾಟವನ್ನು ಸರ್ಕಾರ ಮೊಟಕುಗೊಳಬಾರದು ಎಂದಿದ್ದಾರೆ.
ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, “ಲೋಕಸಭೆ ಉಪಚುನಾವಣೆ ಕಾರ್ಯವೈಖರಿ ಬಗ್ಗೆ ಪರಿಶೀಲಿಸಲಿದ್ದೇನೆ. ಕಾಂಗ್ರೆಸ್ ಬೆಂಬಲಿಸುವಂತೆ ಕೋರಿ ಕಮ್ಯುನಿಸ್ಟ್ ಪಕ್ಷಗಳ ನಾಯಕರು, ರೈತ ಸಂಘಟನೆಗಳ ಸಂಪರ್ಕಿಸುತ್ತಿದ್ದೇನೆ. ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡುವುದಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೆಹಲಿಯಲ್ಲಿ ನೂರಾರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿ ಬಗ್ಗೆ ರೈತರಿಗೆ ಆಕ್ರೋಶವಿದೆ. ಮಸ್ಕಿ, ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದೇವೆ ಎಂದಿದ್ದಾರೆ.
ಇನ್ನು ಜಾತಿ ರಾಜಕಾರಣ ಕುರಿತು ಮಾತನಾಡಿದ ಡಿಕೆಶಿ ಲಿಂಗಾಯತರು ನಮ್ಮವರೇ. ಮರಾಠರು ನಮ್ಮ ಅಣ್ಣ-ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿರುವ ಎಲ್ಲರೂ ಒಂದೇ. ನಾವೂ ಜಾತಿ ಮೇಲೆ ರಾಜಕಾರಣ ಮಾಡಲ್ಲ. ನೀತಿ ಮೇಲೆ ಮಾಡುತ್ತೇವೆ” ಎಂದಿದ್ದಾರೆ.
ಇನ್ನು ಸಾರಿಗೆ ನೌಕರರ ವಿಚಾರವಾಗಿ ಮಾತನಾಡಿದ ಅವರು ಸಾರಿಗೆ ನೌಕರರಿಗೆ ಬೆಂಬಲ ಸೂಚಿಸಿದ್ದೇವೆ. ಸರ್ಕಾರ ಅವರೊಂದಿಗೆ ವರ್ತಿಸುತ್ತಿರುವ ಧೋರಣೆ ಸರಿಯಲ್ಲ.ಅವರ ನೋವು ಆಲಿಸಬೇಕು. ಕೂಡಲೇ ನೌಕರರನ್ನು ಕರೆದು ಮಾತನಾಡಬೇಕು ಸರ್ಕಾರ ಅವರ ಹೋರಾಟವನ್ನು ಮೊಟಕು ಗೋಳಿಸ ಬಾರದು ಎಂದು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಎಂದ ಸಚಿವ ಜಗದೀಶ್ ಶೆಟ್ಟರ್ ಗೆ ಡಿಕೆಶಿ ತಿರುಗೇಟು ನೀಡಿರುವ ಡಿಕೆಶಿ ಶೆಟ್ಟರ್ ಗೆ ಮಾತನಾಡಲು ಶಕ್ತಿ ಕೊಟ್ಟಿದ್ದೇ ನಾವು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದ್ದೆ ನಾವು. ಅವರು ಹೀಗೆ ಮಾತನಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.