ಉತ್ತರಪ್ರದೇಶ: ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!
ನ್ಯೂಸ್ ಕನ್ನಡ ವರದಿ-(14.04.18): ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉತ್ತರಪ್ರದೇಶದಲ್ಲಂತೂ ಅತಿರೇಕದ ಮಟ್ಟವನ್ನು ತಲುಪಿದೆ. ಇದೀಗ ಮುಝಾಫರ್ ನಗರದ ಶಾಮ್ಲಿ ಜಿಲ್ಲೆಯ ಬ್ರಾಲಾ ಎಂಬ ಗ್ರಾಮದಲ್ಲಿ ಹೊಲಕ್ಕೆ ಹೋಗಿದ್ದ 23ರ ಹರೆಯದ ವಿವಾಹಿತೆಯ ಮೇಲೆ ಮೂವರು ಕಾಮಾಂಧರು ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.
ಕೃತ್ಯದ ಬಳಿಕ ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಠಾಣಾಧಿಕಾರಿ ಭಗವತ್ ಸಿಂಗ್ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತನ್ನ ಪತ್ನಿ ಹುಲ್ಲು ತರಲೆಂದು ಹೊಲಕ್ಕೆ ಹೋಗಿದ್ದಾಗ ಆಕೆಯ ಮೇಲೆ ಮೂವರು ಅತ್ಯಾಚಾರ ನಡೆಸಿದರು. ವಿಷಯವನ್ನು ಬೇರೆಯವರಲ್ಲಿ ಬಾಯಿ ಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದರು ಎಂದು ಹೇಳಿದ್ದಾರೆ.