ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು; ಕಾರಣ ಏನು ಗೊತ್ತೇ….?

ಕೋಲಾರ: ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕೋಟುರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ಮದುವೆಯ ವಿವಾದದಿಂದ ಅವರು ಈ ನಿರ್ಧಾರ ನಡೆಸಿದ್ದಾರೆ. ತನ್ನ ತೊರೆದು ಹೋಗಿರುವ ಪತಿ ನಾಗಾರ್ಜುನ್​ ಜೊತೆಗಿನ ಕೌಟುಂಬಿಕ ಕಲಹದಿಂದಾಗಿ ಅವರು ಇಂದು ಬೆಳಗ್ಗೆ 5 ಗಂಟೆಗೆ ವಿಷ ಸೇವಿಸಿ ಆತ್ಮಹತ್ಯೆ ನಡೆಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಮಾರ್ಚ್​ 28ರಂದು ಮಂಡ್ಯ ಮೂಲದ ಉದ್ಯಮಿ ನಾಗರ್ಜುನ್​ ಅವರನ್ನು ಬ್ಯಾಟರಾಯನ ಪುರದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ವಿವಾಹವಾದ ಕೆಲವೇ ಗಂಟೆಗಳಲ್ಲಿ ಇದು ಒತ್ತಾಯ ಪೂರ್ವಕ ಮದುವೆ ಎಂದು ನಾಗರ್ಜುನ ಚೈತ್ರಾ ಅವರನ್ನು ತೊರೆದು ಹೋಗಿದ್ದರು. ಅಲ್ಲದೇ, ಈ ಪ್ರಕರಣ ಸಂಬಂಧ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ನಂತರ ಮಾತುಕತೆಗೆ ಬರುವುದಾಗಿ ನಾಗಾರ್ಜುನ್​ ಮತ್ತು ಪೋಷಕರು ತಿಳಿಸಿದ್ದರು. ನಾಗಾರ್ಜುನ್ ಕುಟುಂಬ ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಈ ದುಡುಕಿನ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಮೂರು ಬಾರಿ ಆತ್ಮಹತ್ಯೆ ಪ್ರಯತ್ನ:
ಚೈತ್ರಾ ​ ಕಳೆದ ಒಂದೂವರೆ ವರ್ಷಗಳಿಂದ ನಾಗರ್ಜುನ್​ ನನ್ನು ಪ್ರೀತಿಸುತ್ತಿದ್ದಳು. ಆತನ ಬಗ್ಗೆ ತುಂಬಾ ಒಲವಿಟ್ಟುಕೊಂಡಿದ್ದಳು. ಇಬ್ಬರು ಒಟ್ಟಿಗೆ ಎಲ್ಲೆಡೆ ಸುತ್ತಾಡಿದ್ದಾರೆ. ಈಗ ನಾಗರ್ಜುನ್​ ಚೈತ್ರಾ ಬೇಡ ಎನ್ನುತ್ತಿದ್ದಾನೆ. ಇದರಿಂದ ನೊಂದು ಈಗಾಗಲೇ ಎರಡು ಮೂರು ಬಾರಿ ಚೈತ್ರಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ನಾವು ತಡೆದಿದ್ದೇವು. ಆದರೆ, ಇಂದು ನಮಗೆ ಅರಿವಿಲ್ಲದೇ ಈ ಘಟನೆ ನಡೆದಿದೆ ಎಂದು ಚೈತ್ರಾ ಅಣ್ಣ ಪ್ರದೀಪ್​ ತಿಳಿಸಿದ್ದಾರೆ.

ಏನಿದು ಘಟನೆ?
ಚೈತ್ರಾ ಕೊಟ್ಟೂರು ಅವರು ಸಂಘಟನೆಗಳನ್ನ ಬಳಸಿಕೊಂಡು ತನ್ನನ್ನು ಬಲವಂತವಾಗಿ ಕೂಡಿಹಾಕಿ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ. ತನಗೆ ಮದುವೆ ಒಂಚೂರು ಇಷ್ಟವಿರಲಿಲ್ಲ. ಬೆದರಿಕೆಗೆ ಬಗ್ಗೆ ಚೈತ್ರಾಗೆ ತಾಳಿ ಕಟ್ಟಿದೆ ಎಂದು ನಾಗಾರ್ಜುನ್ ಹೇಳಿದ್ದರು. ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರ ಪೇಟೆಯಲ್ಲಿರುವ ಚೈತ್ರಾಳ ಮನೆಗೆ ಬಂದು ಗಲಾಟೆ ಮಾಡಿದ್ದರು. ನಂತರ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ದಾಖಲಿಸಿದ್ದರು.

ನಾನು ಮತ್ತು ನಾಗಾರ್ಜುನ್ ಪರಸ್ಪರ ಪ್ರೀತಿಸಿ ನಂತರ ಮದುವೆಯಾಗಿದ್ದೇವೆ. ತನಗೆ ನಾಗಾರ್ಜುನ್ ಅಂದರೆ ಇಷ್ಟ. ಆತನ ಜೊತೆ ಹೋಗುವೆ ಎಂದು ಚೈತ್ರಾ ಕೊಟ್ಟೂರು ಅವರೂ ಕೂಡ ಪೊಲೀಸ್ ಠಾಣೆಯಲ್ಲಿ ವಾದಿಸಿದ್ದರು. ಈ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕೂಡ ಮುಂದಾಗಲಾಗಿತ್ತು. ಈ ವೇಳೆ ನಾಗಾರ್ಜುನ್​ ಮಾತುಕತೆಗೆ ಬಂದಿರಲಿಲ್ಲ.ಮೊದಲೇ ಸ್ನೇಹಿತರು:

ನಾರ್ಗಜುನ್​ ಮತ್ತು ಚೈತ್ರಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಮದುವೆಗೆ ಮುಂಚೆ ಆತ್ಮೀಯತೆ ಹೊಂದಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಇವರ ಅನೇಕ ಫೋಟೋಗಳು ವೈರಲ್​ ಆಗಿದ್ದವು.

Leave a Reply

Your email address will not be published. Required fields are marked *