ಜೈಲು ಪಾಲಾಗುವ ಭೀತಿಯಲ್ಲಿ ನವಜೋತ್ ಸಿಂಗ್ ಸಿಧು: ಕಾರಣವೇನು ಗೊತ್ತೇ?
ನ್ಯೂಸ್ ಕನ್ನಡ ವರದಿ(14-04-2018): ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ನವಜೋತ್ ಸಿಂಗ್ ಸಿಧು ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾದ ಭೀತಿಯನ್ನು ಎದುರಿಸುತ್ತಿದ್ದಾರೆ.
1988ರ ಡಿಸೆಂಬರ್ 27ರಂದು ಪಟಿಯಾಲದ ರಸ್ತೆಯಲ್ಲಿ ನಡೆದ ವಾಗ್ವಾದದ ವೇಳೆ ಸಿಧು 65ರ ವಯೋಮಾನದ ಗುರ್ನಾಮ್ ಸಿಂಗ್ ಎಂಬುವರ ತಲೆಗೆ ಹೊಡೆದಿದ್ದರು. ಗುರ್ನಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಗುರ್ನಾಮ್ ಸಿಂಗ್ರ ಸಾವು ಹೃದಯಾಘಾತದಿಂದ ಆಗಿದೆ’ ಎಂದು ಸಿಧು ವಾದಿಸುತ್ತ ಬಂದಿದ್ದರು. ‘ಗಾಯಗೊಂಡ ಗುರ್ನಾಮ್ ಹೃದಯಾಘಾತದಿಂದ ಸತ್ತಿದ್ದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ’ ಎಂದು ಪಂಜಾಬ್ ಸರ್ಕಾರವೇ ಹೇಳಿಕೆ ನೀಡುವ ಮೂಲಕ ತನ್ನದೇ ಮಂತ್ರಿಮಂಡಲದ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಇದೀಗ ಸಿಧು ಬಂಧನವಾಗುವ ಎಲ್ಲಾ ಸಾಧ್ಯತೆಗಳಿದ್ದು, ಪಂಜಾಬ್ ಸಚಿವ ಮೂರು ವರ್ಷ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ.