“ನಮ್ಮ ಮನೆಯಲ್ಲಿ ಪುಟ್ಟ ಹೆಣ್ಣುಮಕ್ಕಳಿದ್ದಾರೆ. ಬಿಜೆಪಿ, ಸಂಘಪರಿವಾರದವರು ಗೇಟಿನ ಹೊರಗೆ ನಿಲ್ಲಿ”

ನ್ಯೂಸ್ ಕನ್ನಡ ವರದಿ-(14.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣದ ಕುರಿತಾದಂತೆ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮನೆಗಳ ಮುಂದೆ “ಈ ಮನೆಯಲ್ಲಿ ಪುಟ್ಟ ಹೆಣ್ಣುಮಕ್ಕಳಿದ್ದಾರೆ, ಬಿಜೆಪಿ ಮತ್ತು ಸಂಘಪರಿವಾರದವರು ಗೇಟಿನ ಹೊರಗಡೆ ನಿಲ್ಲಿ ಎಂಬ ಪೋಸ್ಟರ್ ರಾರಾಜಿಸುತ್ತಿದೆ.

ಕೇರಳದ ರಾಜಧಾನಿ ತಿರುವನಂತಪುರಂನ ಕಳಮಚ್ಚಲ್ ಎಂಬ ಗ್ರಾಮದಲ್ಲಿ ಈ ಪ್ರತಿಭಟನೆಯು ಆರಂಭವಾಗಿದೆ. ವೋಟು ಕೇಳಲೆಂದು ಬಿಜೆಪಿಗರು ದಯವಿಟ್ಟು ನಮ್ಮ ಮನೆಗೆ ಬರಬಾರದು. ಕರಪತ್ರಗಳಿದ್ದರೆ ಗೇಟಿನ ಹೊರಗಡೆ ಇಟ್ಟು ಹೋಗಿ ಎಂದೂ ಬರೆಯಲಾಗಿದೆ. 8 ವರ್ಷದ ಬಾಲೆಯ ಅತ್ಯಾಚಾರ ಪ್ರಕರಣದ ಕುರಿತಾದಂತೆ ಪ್ರಧಾನಿ ಮೋದಿ ನಿನ್ನೆ ಸಂಜೆಯಷ್ಟೇ ಬಾಯಿ ತೆರೆದಿದ್ದರು. ಈ ಭೀಕರ ಕೃತ್ಯಗಳ ಕುರಿತು ಕೇಂದ್ರ ಸರಕಾರ ವಹಿಸಿರುವ ದಿವ್ಯ ಮೌನವು ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *