ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿದ ತಕ್ಷಣ ದಲಿತರ ಅಭಿವೃದ್ಧಿ ಆಗುವುದಿಲ್ಲ: ಮೋದಿಗೆ ಮಾಯಾವತಿ ಕಿವಿಮಾತು!
ನ್ಯೂಸ್ ಕನ್ನಡ ವರದಿ(14-04-2018): ಬಾಳಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಭೇಟಿ ನೀಡಿ ಕೈಮುಗಿಯುವುದರಿಂದಲೋ, ಹೂಮಾಲೆ ಹಾಕುವುದರಿಂದಲೋ ಅಥವಾ ಅವರ ಹೆಸರಿನಲ್ಲಿ ಯೋಜನೆಗಳನ್ನು ಉದ್ಘಾಟನೆ ಮಾಡುವುದರಿಂದಲೋ ದಲಿತರ ಅಭಿವೃದ್ಧಿ ಯಾಗುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರಧಾನಿ ಮೋದಿಗೆ ಕಿವಿಮಾತು ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಸಂವಿಧಾರ ಶಿಲ್ಫಿಯ ಪ್ರತಿಮೆಗೆ ಹಾರಾರ್ಪಣೆ ಮಾಡಿ ಗೌರವವನ್ನರ್ಪಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಯಾವತಿ ಪ್ರಧಾನಿಯವರನ್ನು ಟೀಕಿಸಿದ್ದಾರೆ.
ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆಗೈದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದ ಮಾಯಾವತಿ “ ಮೋದಿಯವರೇ ತಾವು ಅಂಬೇಡ್ಕರ್ ಪ್ರತಿಮೆಗೆ ಕೈಮುಗಿದ ತಕ್ಷಣ ದಲಿತರ ಅಭಿವೃದ್ಧಿ ಆಗಲಾರದು. ತಾವು ಅಂಬೇಡ್ಕರ್ ಹೆಸರಿನಲ್ಲಿ ಯೋಜನೆಗಳನ್ನು ಉದ್ಘಾಟಿಸಿದ ತಕ್ಷಣ ದಲಿತರ ಅಭಿವೃದ್ಧಿ ಆಗುವುದಿಲ್ಲ. ದಲಿತ ಸಮಾಜಕ್ಕೆ ನೀಡಬೇಕಾದ ಸವಲತ್ತುಗಳನ್ನು ಒದಗಿಸುವ ಮೂಲಕ ಅವರಿಗೆ ರಕ್ಷಣೆಯನ್ನು ನೀಡಿ. ದೇಶದಲ್ಲಿ ದಲಿತರು ಭಯದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.