ವಿರೋಧ ಪಕ್ಷಗಳ ವಿರುದ್ಧ ಉಪವಾಸ ನಡೆಸಿದ ದೇಶದ ಪ್ರಪ್ರಥಮ ಪ್ರಧಾನಿ ಮೋದಿ: ಚಂದ್ರಬಾಬು ನಾಯ್ಡು ವ್ಯಂಗ್ಯ!
ನ್ಯೂಸ್ ಕನ್ನಡ ವರದಿ(14-04-2018): ನರೇಂದ್ರ ಮೋದಿ ಭಾರತದ ಇತಿಹಾಸದಲ್ಲೇ ಉಪವಾಸ ಸತ್ಯಾಗ್ರಹ ಮಾಡಿದ ಭಾರತ ಕಂಡ ಪ್ರಪ್ರಥಮ ಪ್ರಧಾನಿಯಾಗಿದ್ದಾರೆ ಎಂದು ಆಂದ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಚಂದ್ರ ಬಾಬು ನಾಯ್ಡು ಲೇವಡಿ ಮಾಡಿದ್ದಾರೆ.
ನಮ್ಮ ದೇಶದ ಹಿಂದಿನ ಇತಿಹಾಸವನ್ನು ನೋಡಿದರೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ಹಾಗೂ ಉಪವಾಸ ಮುಷ್ಕರಗಳ ನಡೆಸಿದ ವಿಚಾರ ಕಾಣಲು ಸಿಗುತ್ತದೆ. ಆದರೆ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿಯೋರ್ವರ ಉಪವಾಸ ಮುಷ್ಕರವನ್ವು ಕಾಣಲು ಸಾಧ್ಯವಾಗುವುದಿಲ್ಲ ಎಂದು ಚಂದ್ರ ಬಾಬು ನಾಯ್ಡು ಹೇಳಿದರು.
ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತನ್ನ ಮೂಗಿನ ನೇರಕ್ಕೆ ತೀರ್ಮಾನಗಳನ್ನು ತೆಗೆಯುವ ಪ್ರಧಾನಿಯವರು ಇದೀಗ ವಿರೋಧ ಪಕ್ಷಗಳ ವಿರುದ್ಧ ಉಪವಾಸ ಮುಷ್ಕರವನ್ನು ಹೂಡುವ ಮೂಲಕ ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.