ಆಸಿಫಾ ಪ್ರಕರಣದಲ್ಲಿ ರಕ್ಷಕರಾಗಬೇಕಾದ ಪೋಲೀಸರೇ ರಾಕ್ಷಸರಾದರೆ ನ್ಯಾಯ ನೀಡುವವರು ಯಾರು?: ನಿರ್ಭಯಾ ತಾಯಿ

ನ್ಯೂಸ್ ಕನ್ನಡ ವರದಿ(14-04-2018): ಜನರಿಗೆ ರಕ್ಷಕರಾಗಬೇಕಾದ ಪೋಲೀಸರೇ ರಾಕ್ಷಸರಾದರೆ ನ್ಯಾಯಪಾಲನೆ ಹೇಗೆ ಸಾಧ್ಯ. ನಮ್ಮ ನ್ಯಾಯ ವ್ಯವಸ್ಥೆ ದುರ್ಬಲವಾಗಿದ್ದು, ಅತ್ಯಾಚಾರ ಪ್ರಕರಣಗಳು ಸತತವಾಗಿ ನಡೆಯುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂದು ನಿರ್ಭಯಾ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ನಿರ್ಭಯಾಳ ಹತ್ಯೆಯಾದರೂ ಆರೋಪಿಗಳಿಗೆ ಹಲವು ವರ್ಷಗಳು ಕಳೆದ ನಂತರ ಗಲ್ಲು ಶಿಕ್ಷೆಯಾಗಿದೆ ಆದರೆ ಆರೋಪಿಗಳಿಗೆ ಶಿಕ್ಷೆ ಇದುವರೆಗೆ ಜಾರಿಯಾಗಿಲ್ಲ. ನಾವು ನ್ಯಾಯ ಕೇಳಲು ಹೋದರೆ ಸೆಷನ್ಸ್ ಕೋರ್ಟಿನಿಂದ ಹೈಕೋರ್ಟ್, ಹೈಕೋರ್ಟಿನಿಂದ ಸುಪ್ರೀಮ್ ಕೋರ್ಟಿಗೆ ಅಲೆದಾಡಿಸುತ್ತಾರೆ. ನಿರ್ಭಯ ಪ್ರಕರಣದಲ್ಲೂ ಹಾಗೆಯೇ ಹಾಗಿದ್ದು ಇದೀಗ ಆಸಿಫಾ ಪ್ರಕರಣದಲ್ಲೂ ಕೂಡ ಇದೇ ಅವ್ಯವಸ್ಥೆ ಕಂಡುಬರುತ್ತಿದೆ ಎಂದರು.

ಕಥುವಾದ ಅಸೀಫಾ ಪ್ರಕರಣದಲ್ಲಿ ಪೋಲೀಸರು ಆರೋಪಿಗಳಿಂದ ಹಣ ಪಡೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ನಮ್ಮ ವ್ಯವಸ್ಥೆಯ ಮೇಲಿರುವ ವಿಶ್ವಾಸವು ಹೊರಟುಹೋಗುತ್ತಿದೆ. ರಕ್ಷಕರಾದ ಪೋಲೀಸರೇ ರಾಕ್ಷಸರಾದರೆ ಹೇಗೆ ಎಂದು ನಿರ್ಭಯಾ ತಾಯಿ ಪ್ರಶ್ನಿಸಿದರು.

Leave a Reply

Your email address will not be published. Required fields are marked *