ವಿದೇಶಿ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವ ಆಸಿಫಾ ರೇಪ್ ಆ್ಯಂಡ್ ಮರ್ಡರ್ ಪ್ರಕರಣ: ವಿದೇಶಗಳಲ್ಲೂ ಭಾರತದ ಮಾನ ಹರಾಜು!

ನ್ಯೂಸ್ ಕನ್ನಡ ವರದಿ(14-04-2018): ಜಮ್ಮುವಿನ ಕಥುವಾ ಜಿಲ್ಲೆಯ ರಸನಾ ಎಂಬಲ್ಲಿ ಅಪಹರಣಕ್ಕೀಡಾಗಿ ಅತ್ಯಾಚಾರವೆಸಗಲ್ಪಟ್ಟು ಕೊಲೆಗೀಡಾದ 8ರ ಹರೆಯದ ಆಸಿಫಾ ಎಂಬ ಬಾಲೆಯ ರೇಪ್ ಅ್ಯಂಡ್ ಮರ್ಡರ್ ಸುದ್ಧಿಯು ವಿದೇಶಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುವುದರೊಂದಿಗೆ ಅಂತರಾಷ್ಟ್ರೀಯ ಮಟ್ಚದಲ್ಲಿ ಭಾರತದ ಮಾನ ಹರಾಜಾಗಿದೆ.

ಅಲೆಮಾರಿ ಸುನ್ನೀ ಮುಸ್ಲಿಮ್ ಪಂಗಡಕ್ಕೆ ಸೇರಿದ ಕುದುರೆ ಕಾಯುತ್ತಿದ್ದ ಈ ಹಸುಳೆಯನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಬಾಲೆಗೆ ನಿದ್ರಾ ಮಾತ್ರೆಯನ್ನು ನೀಡಿ ಸತತ ಒಂದು ವಾರಗಳ ಕಾಲ ಅತ್ಯಾಚಾರ ಮಾಡಿ ನಂತರ ಬರ್ಬರವಾಗಿ ಕೊಲೆ ಮಾಡಿ ಕಾಡಿನಲ್ಲಿ ಎಸೆದಿದ್ದರು. ನಂತರ ಪ್ರಕರಣವನ್ನು ಮುಚ್ಚಿ ಹಾಕಲು ಪೋಲೀಸರಿಗೆ 1.5 ಲಕ್ಷ ಹಣ ನೀಡಿ ಪ್ರಕರಣವನ್ನು ಪ್ರಕರಣವನ್ನು ಮುಚ್ಚಿ ಹಾಕಲು ಶ್ರಮಿಸಿದರು. ಲಂಚ ಸ್ವೀಕರಿಸಿದ ಪೋಲೀಸರು ಪ್ರಥಮ ಹಂತದಲ್ಲಿ ಆರೋಪಿಗಳನ್ನು ರಕ್ಷಿಸಿದರೂ ನಂತರ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸರಕಾರವು ಪ್ರಕರಣವನ್ನು ಅಪರಾಧ ತನಿಖಾ ವಿಭಾಗಕ್ಕೆ ಹಸ್ತಾಂತರಿಸಿತ್ತು. ಅಪರಾಧ ವಿಭಾಗದ ತನಿಖೆಯಿಂದ ಪೋಲೀಸರು ತಪ್ಪಿತಸ್ಥರೆಂದು ಸಾಬೀತಾಗಿದ್ದು, ತಪ್ಪಿತಸ್ಥ ಪೋಲೀಸರನ್ನು ಆರೋಪಿಗಳೊಂದಿಗೆ ಬಂಧಿಸಲಾಗಿದೆ.

ಈ ಅಮಾನುಷ ಕೃತ್ಯವನ್ನು ದೇಶಾದ್ಯಂತ ಜನರು ಪಕ್ಷಾತೀತರಾಗಿ ಖಂಡಿಸುತ್ತಿದ್ದು, ಇದೀಗ ವಿದೇಶಿ ಮಾಧ್ಯಮಗಳ ಮುಖಪುಟದಲ್ಲಿ ವರದಿಯಾಗುವುದರೊಂದಿಗೆ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ.ಯೂರೋಪ್ ಮೂಲದ ‘ದಿ ಗಾರ್ಡಿಯನ್’, ಅಮೇರಿಕಾದ ‘ವಾಷಿಂಗ್ಟನ್ ಪೋಸ್ಟ್’, ನ್ಯೂಯಾರ್ಕಿನ ‘ನ್ಯೂಯಾರ್ಕ್ ಟೈಮ್ಸ್’, ಯುಎಇ ಮೂಲದ ಗಲ್ಫ್ ನ್ಯೂಸ್, ಬ್ರಿಟನ್ ಮೂಲದ ‘ಬಿಬಿಸಿ ನ್ಯೂಸ್’, ಸೌದಿ ಮೂಲದ ‘ಸೌದಿ ಅಕ್ಬಾರ್’ ಸೇರಿದಂತೆ ವಿಶ್ವದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಈ ಪ್ರಕರಣವು ರಾರಾಜಿಸ ತೊಡಗಿದೆ.

Leave a Reply

Your email address will not be published. Required fields are marked *