ತನ್ನ ಮಗಳಿಗೆ ಆಸಿಫಾ ಎಂದು ಹೆಸರಿಟ್ಟ ಕೇರಳದ ಪತ್ರಕರ್ತ ರಜಿತ್ ರಾಮ್!
ನ್ಯೂಸ್ ಕನ್ನಡ ವರದಿ(14-04-2018): ಕೇರಳದ ಪತ್ರಕರ್ತನೊಬ್ಬ ತನ್ನ ಮಗಳಿಗೆ ಅಸಿಫಾ ರಾಜ್ ಎಂದು ಹೆಸರಿಟ್ಟು ಮಾನವೀಯತೆಯನ್ನು ಮೆರೆದ ಘಟನೆ ನಡೆದಿದ್ದು, ಇದು ಸಾಮಾಜಿಕ ತಾಣದಲ್ಲಿ ಭಾರಿ ವೈರಲಾಗುತ್ತಿದೆ.
ರಜಿತ್ ರಾಮ್ ಎಂಬ ಎಂಬ ಕೇರಳದ ಪತ್ರಕರ್ತ ತನ್ನ ಫೇಸ್ ಬುಕ್ ಪೇಜಿನಲ್ಲಿ ಈ ಕುರಿತು ಬರೆದಿದ್ದು, “ ನನ್ನ ಮಗಳಿಗೆ ಆಸಿಫಾ ಎಂದು ಹೆಸರಿಚ್ಟಿದ್ದೇನೆ. ಅಸಿಫಾ.ಕೆ.ರಾಜ್ ಎಂದಾಗಿರುತ್ತದೆ ನನ್ನ ಮಗಳ ಹೆಸರು. ಅಸಿಫಾ ನನ್ನ ಮಗಳು” ಎಂದು ಹೇಳಿದ್ದಾರೆ.
ಪೋಸ್ಟ್ ಹಾಕಿದ ಕೆಲವೇ ತಾಸುಗಳಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಲೈಕ್ ಹಾಗೂ ಸುಮಾರು 14 ಸಾವಿರ ಶೇರ್ ಮಾಡಲ್ಪಟ್ಟು ಈ ಪೋಸ್ಟ್ ಸಾಮಾಜಿಕ ತಾಣದಲ್ಲಿ ಭಾರೀ ವೈರಲಾಗಿದೆ.
പേരിട്ടു.. അതെ..അതുതന്നെ.ആസിഫ എസ് രാജ്…എന്റെ മോളാണവൾ
Posted by Rajith Ram on Friday, April 13, 2018