ಬುದ್ಧಿವಂತಳಾಗಿದ್ದ ಮಗಳು ವೈದ್ಯೆಯಾಗಬೇಕೆಂದು ಬಯಸಿದ್ದೆವು: ಅಸಿಫಾ ತಾಯಿ

ನ್ಯೂಸ್ ಕನ್ನಡ ವರದಿ(14-04-2018): ಶೈಕ್ಷಣಿಕವಾಗಿ ಬಹಳ ಬುದ್ಧಿವಂತಳಾಗಿದ್ದ ನನ್ನ ಮಗಳು ವೈದ್ಯೆಯಾಗಬೇಕೆಂಬ ಕನಸನ್ನು ಕಾಣುತ್ತಿದ್ದೆವು ಆದರೆ ಆ ಬಾಲೆಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡುವ ಮೂಲಕ ದುಷ್ಕರ್ಮಿಗಳು ನಮ್ಮ ಕನಸನ್ನು ನುಚ್ಚುನೂರು ಮಾಡಿದರೆಂದು ಕಥುವಾ ರೇಪ್ ಆ್ಯಂಡ್ ಮರ್ಡರ್ ಸಂತೃಸ್ತೆ ಆಸಿಫಾ ತಾಯಿ ಹೇಳಿದ್ದಾರೆ.

ಆಸಿಫಾ ಒಂದು ವರ್ಷ ಪ್ರಾಯದವಳಾಗಿದ್ದಾಗ ತನ್ನ ಸಹೋದರನ ಒತ್ತಾಯದ ಮೇರೆಗೆ ಆಸಿಫಾ ಪೋಫಕರು ಮಗಳನ್ನು ಆತನಿಗೆ ದತ್ತು ನೀಡಿದ್ದರು. ತನ್ನ ಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿಗಳನ್ನು ಕಠಿಣ ಶಿಕ್ಷಗೆ ಗುರಿಪಡಿಸಬೇಕೆಂದು ಆಸಿಫಾ ತಾಯಿ ಒತ್ತಾಯಿಸಿದ್ದಾರೆ.

ನಾನು ಮಗಳನ್ನು ಸಹೋದರನಿಗೆ ನೀಡಿ ತಪ್ಪು ಮಾಡಿದೆ. ಮಗು ನನ್ನ ಬಳಿಯಿದ್ದರೆ ಬದುಕುಳಿಯುತ್ತಿದ್ದಳೇನೋ ಎಂದು ಅಳುತ್ತಾ ಹೇಳಿದ ಆಸಿಫಾ ತಾಯಿ, ದನ ಕರುಗಳಿಗೆ ಹುಲ್ಲು ನೀಡುತ್ತಿದ್ದ 8ರ ಹರೆಯದ ನನ್ನ ಮಗಳು ಮಾಡಿದ ತಪ್ಪಾದರೂಏನು?. ಯಾಕಾಗಿ ಈ ರೀತಿ ಅಮಾನುಷವಾಗಿ ನನ್ನ ಮಗಳನ್ವು ಕೊಂದು ಹಾಕಿದರು ಎಂದು ಆಸಿಫಾ ತಾಯಿ ಕಣ್ಣೀರಿಡುತ್ತಾ ಪ್ರಶ್ನಿಸಿದರು.

Leave a Reply

Your email address will not be published. Required fields are marked *