ಜೇಸನ್ ರಾಯ್ ಸ್ಫೋಟಕ ಬ್ಯಾಟಿಂಗ್: ರೋಚಕ ಜಯ ಸಾಧಿಸಿದ ಡೆಲ್ಲಿ ಡೇರ್ ಡೆವಿಲ್ಸ್!
ನ್ಯೂಸ್ ಕನ್ನಡ ವರದಿ-(14.04.18): ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ 9ನೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ನಡೆದಿದ್ದು, ಈ ಪಂದ್ಯಾಟದಲ್ಲಿ 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಜೇಸನ್ ರಾಯ್ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ಸಾಧಿಸಿದೆ.
ಬಳಿಕ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಸ್ಫೋಟಕ ಆರಂಭ ಪಡೆಯಿತು. ತಂಡದ ಪರವಾಗಿ ಜೇಸನ್ ರಾಯ್ 52 ಎಸೆತಗಳಲ್ಲಿ 90 ರನ್ ಗಳಿಸಿದ್ದು, ರಿಶಭ್ ಪಂತ್(47) ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಜೇಸನ್ ರಯ್ ಗೆ ಸಾಥ್ ನೀಡಿದರು. ಕೊನೆಯ ಒಂದು ಎಸೆತದಲ್ಲಿ ಒಂದು ರನ್ ನ ಅಗತ್ಯವಿದ್ದಾಗ ಜೇಸನ್ ರಾಯ್ ತಂಡವನ್ನು ಗೆಲುವಿನ ದಡ ದಾಟಿಸಿದರು. ಈ ಮೂಲಕ ಡೆಲ್ಲಿ ತಂಡವು ಪ್ರಥಮ ಜಯಗಳಿಸಿದೆ.