ಪಂಜಾಬ್ ನ ಖ್ಯಾತ ಹಾಡುಗಾರ ಪರ್ಮೇಶ್ ಗೆ ಗುಂಡಿಕ್ಕಿದ್ದು ನಾನೇ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ದುಷ್ಕರ್ಮಿ!

ನ್ಯೂಸ್ ಕನ್ನಡ ವರದಿ-(14.04.18): ಸಾಧಾರಣವಾಗಿ ಅಪರಾಧ ಕೃತ್ಯವೆಸಗಿದವರು ತಲೆಮರೆಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ಪಂಜಾಬ್ ನ ಖ್ಯಾತ ಗಾಯಕನೋರ್ವನಿಗೆ ಗುಂಡಿಕ್ಕಿದ ಬಳಿಕ ಗನ್ ಹಿಡಿದ ಫೋಟೊದೊಂದಿಗೆ ಫೇಸ್ ಬುಕ್ ನಲ್ಲಿ ಅಪ್ಡೇಟ್ ಮಾಡಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಪಂಜಾಬ್ ನ ಹಾಡುಗಾರ ಪರ್ಮೇಶ್ ಗೆ ಗುಂಡಿಕ್ಕಿದ್ದು ನಾನೇ ಎಂದು ದಿಲ್ಪ್ರೀತ್ ಸಿಂಗ್ ಧಹಾನ್ ಎನ್ನುವಾತ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ

ತನ್ನ ಸ್ನೇಹಿತರ ಜೊತೆ ಇದ್ದಾಗ ಪರ್ಮಿಶ್ ವೆರ್ಮಾ ಮೇಲೆ ಗುಂಡು ಹಾರಿಸಲಾಗಿತ್ತು. ಈ ಕುರಿತು ಪೋಸ್ಟ್ ಮಾಡಿದ ದಿಲ್ ಪ್ರೀತ್ ಸಿಂಗ್, ನಾನು ದಿಲ್ ಪ್ರೀತ್ ಸಿಂಗ್, ನಾನಿಂದು ಪರ್ಮಿಶ್ ವರ್ಮಾನನ್ನು ಶೂಟ್ ಮಾಡಿದ್ದೇನೆಂದು ಎಲ್ಲರಲ್ಲು ಹೇಳಲು ಬಯಸುತ್ತೇನೆ. ನಿನ್ನನ್ನು ಎಲ್ಲಿ ಬೇಕಾದರೂ ಮುಖಾಮುಖಿಯಾಗಬಲ್ಲೆ ಎಂದು ನೀ ನನಗೆ ಚಾಲೆಂಜ್ ಮಾಡಿದ್ದೆ. ನೀನು ನಿನ್ನನ್ನು ರಕ್ಷಿಸಲು ತುಂಬಾ ಪ್ರಯತ್ನ ಮಾಡಿದ್ದೀಯಾ ಆದರೂ ನೀನು ನನಗೆ ಸಿಕ್ಕಿದೆ. ನಾನು ಹೇಳಿದಂತೆ ಕೇಳು ಇಲ್ಲದಿದ್ದಲ್ಲಿ ನಾನು ನಿನ್ನನ್ನು ಎಲ್ಲಾದರೂ ಭೇಟಿಯಾಗುತ್ತೇನೆ ಎಂದಿದ್ದೆ. ಅದು ಇಂದು ನಡೆಯಿತು”

ನನ್ನನ್ನು ಮುಖತಃ ಭೇಟಿಯಾಗಿದ್ದು ನೀನು ಮಾಡಿದ ದುಬಾರಿ ತಪ್ಪು. ನಮ್ಮ ನಡುವೆ ಇದೀಗ ಏನೆಲ್ಲಾ ನಡೆದಿದೆಯೋ, ಅದು ಎಲ್ಲಿಯವರೆಗೆ ಹೋಗುತ್ತದೆಂದು ನಾನು ನೋಡುತ್ತೇನೆ. ನನಗೆ ಕಟ್ಟದ್ದೇನಾದರೂ ಸಂಭವಿಸಬಹುದು ಎಂದು ನೀನು ಭಾವಿಸಿಕೊಳ್ಳಬೇಡ. ನನ್ನ ಜೀವನದಲ್ಲಿ ನಾನು ಹಲವು ಸ್ನೇಹಿತರುಗಳನ್ನು ಗಳಿಸಿಕೊಂಡಿದ್ದೇನೆ. ಇಂದು ದೇವರ ಕೃಪೆಯಿಂದ ನೀನು ಬಚಾವಾದೆ. ಆದರೆ ಎಲ್ಲಾ ವೇಳೆಗಳಲ್ಲೂ ಹೀಗೆಯೇ ಆಗಬಹುದು ಅಂದುಕೊಳ್ಳಬೇಡ. ಇತರರು ಹೇಳುವುದನ್ನು ಕೇಳಿಸಿಕೊಳ್ಳಬೇಡ, ನಿನ್ನ ಮನಸ್ಸು ಹೇಳುವುದನ್ನು ಮಾಡು” ಎಂದು ಆರೋಪಿಯು ಫೇಸ್ ಬುಕ್ ಮುಖಾಂತರ ಪೋಸ್ಟ್ ಮಾಡಿದ್ದಾನೆ.

https://www.facebook.com/dilpreet.singh.9889261/posts/1606938779423752

Leave a Reply

Your email address will not be published. Required fields are marked *