ಆಸೀಫಾ ಅತ್ಯಾಚಾರ ಪ್ರಕರಣದ ಕುರಿತು ಹೃದಯಸ್ಪರ್ಶಿ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿ!

ನ್ಯೂಸ್ ಕನ್ನಡ ವರದಿ-(14.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು.ಇದೀಗ ಈ ಕುರಿತಾದಂತೆ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿರುವ ಈ ಸುದ್ದಿಯ ಕುರಿತು ಟ್ವೀಟ್ ಮಾಡಿದ ಶಾಹಿದ್ ಅಫ್ರಿದಿ, 6 ವರ್ಷದ ಝೈನಬ್ ಆಗಿರಲಿ 8 ವರ್ಷ ಹರೆಯದ ಜಮ್ಮುವಿನ ಆಸಿಫಾ ಆಗಿರಲಿ ಇಂತಹಾ ಭೀಭತ್ಸ ಮತ್ತು ಭಯಾನಕ ಕೃತ್ಯಗಳು ಖಂಡಿಸಲ್ಪಡಬೇಕು. ಈ ಪ್ರಕರಣದ ಹಿಂದೆ ಯಾರಿದ್ದಾರೆಯೋ, ಅವರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಈ ಪ್ರಕರಣವು ಎಲ್ಲರಿಗೂ ಒಂದು ಪಾಠವಾಗಬೇಕು. ಇನ್ನು ಮುಂದೆ ಯಾವುದೇ ಮಗಳು ಕೂಡಾ ಇಂತಹಾ ಕೃತ್ಯಕ್ಕೆ ಒಳಗಾಗಬಾರದು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *